ಲಂಡನ್:ಪೋಲೆಂಡ್‌ನಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿರುವಭಾರತೀಯ ವ್ಯಕ್ತಿಯನ್ನು ‘ಪರಾವಲಂಬಿ’, ‘ಆಕ್ರಮಣಕಾರ’ ಎಂದು ಜರಿದಿರುವಅಮೆರಿಕದ ವ್ಯಕ್ತಿ, ‘ನಿಮ್ಮ ದೇಶಕ್ಕೆ ಹಿಂತಿರುಗು’ ಎಂದು ಹೇಳಿದ್ದಾನೆ.

ಭಾರತೀಯನ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಡಿಯೊ ಚಿತ್ರೀಕರಿಸಲಾಗಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ವಿಡಿಯೊವನ್ನು ಯಾವ ನಗರದಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಟ್ವಿಟರ್ ಬಳಕೆದಾರರು ಅದಕ್ಕೆ ಪ್ರತಿಕ್ರಿಯಿಸುವಾಗ ವಾರ್ಸಾ ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದಾರೆ.

ಮಾಲ್ ಬಳಿ ನಡೆದುಕೊಂಡು ಹೋಗುವ ಭಾರತೀಯನನ್ನು ಉದ್ದೇಶಿಸಿ ‘ಯುರೋಪಿನಲ್ಲಿ ಏಕೆ ಇದ್ದೀಯಾ? ರೆಕಾರ್ಡ್ ಮಾಡುವುದನ್ನು ನಿಲ್ಲಿಸಿ’ ಎಂದು ಅಮೆರಿಕ ವ್ಯಕ್ತಿ ಹೇಳುವುದು ವಿಡಿಯೊದಲ್ಲಿದೆ.

‘ನಾನು ಅಮೆರಿಕದಿಂದ ಬಂದಿದ್ದೇನೆ. ನೀವು ಪೋಲ್ಯಾಂಡ್‌ನಲ್ಲಿ ಏಕೆ ಇದ್ದೀರಿ?ಪೋಲ್ಯಾಂಡ್ ಅನ್ನು ಆಕ್ರಮಿಸಬಹುದು ಎಂದು ಭಾವಿಸುತ್ತೀರಾ? ನಿಮ್ಮ ಸ್ವಂತ ದೇಶಕ್ಕೆ ಏಕೆ ಹಿಂತಿರುಗಬಾರದು? ಎಂದು ಕ್ಯಾಮೆರಾ ಹಿಂದಿನ ವ್ಯಕ್ತಿ ಹೇಳುತ್ತಾರೆ.

ಇದು ಯಾವಾಗ ನಡೆಯಿತು? ಇಬ್ಬರ ನಡುವಿನ ಸಂಭಾಷಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.‘ಜನಾಂಗೀಯತೆಯ ನಾಚಿಕೆಗೇಡಿನ ಪ್ರದರ್ಶನ’ ಎಂದುಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೊದಲ್ಲಿ ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.