ಹ್ಯೂಸ್ಟನ್ : ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ವಿನೂತನವಾಗಿ ಟೆಸ್ಲಾ ಕಾರ್ ಬೆಳಕಿನ ಪ್ರದರ್ಶನ ನಡೆಸಿದರು.

ಇಲ್ಲಿನ ಗುರುವಾಯೂರಪ್ಪನ್ ಕೃಷ್ಣ ದೇವಸ್ಥಾನದ ಬಳಿ ನೂರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಕಾರುಗಳ ದೀಪಗಳನ್ನು ಉರಿಸುವ ಮತ್ತು ನಂದಿಸುವ ಮೂಲಕ ಸುಂದರ ಬೆಳಕಿನ ಪ್ರದರ್ಶನ ನಡೆಸಿದರು.

ಕಾರ್‌ಗಳೊಂದಿಗೆ ರಾಮಮಂದಿರ ಚಿತ್ರವಿರುವ ರಾಮರಥವು ಇತ್ತು. ಬಳಿಕ ದೇವಳದಲ್ಲಿ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ಇತರ ಭಕ್ತರು ರಾಮ ಮತ್ತು ಕೃಷ್ಣನ ಕುರಿತಾದ ಭಜನಾ ಸಂಕೀರ್ತನೆಗಳನ್ನು ಹಾಡಿದರು.

‘ಜನವರಿ ಮಧ್ಯದವರೆಗೆ ಅಮೆರಿಕದ 21 ರಾಜ್ಯ ಮತ್ತು 41 ನಗರಗಳಲ್ಲಿ ವಿಶ್ವ ಹಿಂದೂ ಪರಿಷತ್ 51 ಕಾರ್ ರ‍್ಯಾಲಿಗಳನ್ನು ಆಯೋಜಿಸಿದೆ’ ಎಂದು ಪರಿಷತ್‌ನ ಅಚಲೇಶ್ ಅಮರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.