ನವದೆಹಲಿ: ನಿಖಿಲ್ ಗುಪ್ತಾ ಭಾಗಿಯಾಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಭಾರತೀಯ ನ್ಯಾಯಾಂಗ ಅಧಿಕಾರಿಗಳಿಗೆ ‘ಯಾವುದೇ ಗಡಿ ಇಲ್ಲ’ ಎಂದು ಜೆಕ್ನ ನ್ಯಾಯಾಂಗ ಸಚಿವಾಲಯದ ವಕ್ತಾರರಾದ ವ್ಲಾಡಿಮಿರ್ ರೆಪ್ಕಾ ಹೇಳಿದ್ದಾರೆ.

ಸಿಖ್ ಪ್ರತ್ಯೇಕತವಾದಿಯೊಬ್ಬರನ್ನು ಅಮೆರಿಕದಲ್ಲಿಯೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪ ನಿಖಿಲ್ ಗುಪ್ತಾ ಅವರ ಮೇಲಿದೆ. ಆರು ತಿಂಗಳ ಹಿಂದೆಯೇ ಅವರನ್ನು ಬಂಧಿಸಲಾಗಿದ್ದು, ಸದ್ಯ ಅವರು ಜೈಲಿನಲ್ಲಿದ್ದಾರೆ.

ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಬೇಕು ಎಂದು ಕೋರಿ ನಿಖಿಲ್ನ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಆ ಬೆಳವಣಿಗೆಯ ಹಿಂದೆಯೇ ಜೆಕ್ ನ್ಯಾಯಾಂಗ ಸಚಿವಾಲಯದ ಹೇಳಿಕೆ ಹೊರಬಿದ್ದಿದೆ.

ತನಿಖೆಯು ಪ್ರಗತಿಯಲ್ಲಿರುವ ಪ್ರಕರಣದಲ್ಲಿ ನಿಖಿಲ್ ಗುಪ್ತಾರನ್ನು ತನಿಖೆಗೆ ಒಳಪಡಿಸಲು ಆಗುವಂತೆ ಅವರನ್ನು ಗಡೀಪಾರು ಮಾಡುವಂತೆ ಕೋರಿ ಅಮೆರಿಕವು ಜೆಕ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಈ ಮಧ್ಯೆ, ’ತನ್ನ ವ್ಯಾಪ್ತಿಯಲ್ಲಿರುವ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಗಣರಾಜ್ಯದ ಯಾವುದೇ ನ್ಯಾಯಾಂಗ ಅಧಿಕಾರಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ’ ಎಂದು ಸಚಿವಾಲಯದ ವಕ್ತಾರರಾದ ರೆಪ್ಕಾ ತಿಳಿಸಿದರು.

ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಕುರಿತ ತನಿಖೆಗಾಗಿ ಭಾರತ ಸರ್ಕಾರವು ಈಗಾಗಲೇ ಸಮಿತಿಯನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.