ಬೇರೂಟ್: ಸಿರಿಯಾದ ಅಲೆಪ್ಪೊ ನಗರದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಹಲವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಆಗ್ನೇಯ ಭಾಗದ ಅಲೆಪ್ಪೊ ನಗರದ ಮೇಲೆ ಈ ದಾಳಿ ನಡೆದಿದೆ ಎಂದಷ್ಟೇ ಹೇಳಿರುವ ಸನಾ ಸುದ್ದಿಸಂಸ್ಥೆ ಮೃತರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

‘ಇಸ್ರೇಲ್ ದಾಳಿಯಲ್ಲಿ ಹಲವರು ಹುತಾತ್ಮರಾಗಿದ್ದು, ಕೆಲ ಸ್ವತ್ತಿನ ನಷ್ಟವಾಗಿದೆ’ಎಂದಷ್ಟೇ ತಿಳಿಸಿದೆ. ಈ ಬಗ್ಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

1948ರಲ್ಲಿ ಇಸ್ರೇಲ್ ದೇಶ ಅಸ್ತಿತ್ವಕ್ಕೆ ಬಂದಾಗಿನಿಂದ ಇಸ್ರೇಲ್ ಮತ್ತು ಸಿರಿಯಾ ನಡುವೆ ಸಂಘರ್ಷವಿದೆ.

ಹಲವು ವರ್ಷಗಳ ಈ ಸಂಘರ್ಷದಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ಅವರನ್ನು ಇರಾನ್ ಬೆಂಬಲಿಸುತ್ತಿದೆ. ಈ ಹಿಂದೆ ಇಸ್ರೇಲ್, ಇರಾನ್ ಅನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡಿದೆ.

ಗಾಜಾದಲ್ಲಿ ಹಮಾಸ್ ಬಂಡುಕೋರರ ವಿರುದ್ಧದ ಇಸ್ರೇಲ್ ಹೋರಾಟದ ನಡುವೆಯೇ ಈ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.