ಜಕಾರ್ತಾ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬುಧವಾರ ಇಲ್ಲಿ ಇಂಡೊನೇಷ್ಯಾ ಮತ್ತು ರಷ್ಯಾದ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಜಿ20 ಶೃಂಗಸಭೆ, ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚಿಸಿದರು.

ಇಂಡೊನೇಷ್ಯಾದ ರೆಟ್ನೊ ಮಾರ್ಸುಡಿ ಹಾಗೂ ರಷ್ಯಾದ ಸೆರ್ಗಿ ಲಾವ್ರೋವ್ ಅವರ ಜೊತೆಗೆ ಚರ್ಚಿಸಿದರು. ಜೈಶಂಕರ್ ಅವರು ಇಲ್ಲಿಗೆ 20ನೇ ಆಸಿಯಾನ್–ಇಂಡಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.

ಆಸಿಯಾನ್ ದೇಶಗಳ ಅಧ್ಯಕ್ಷರಾಗಿ ಇಂಡೊನೇಷ್ಯಾವು ಈ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಎರಡು ರಾಷ್ಟ್ರಗಳ ವಿದೇಶಾಂಗ ಸಚಿವರ ಜೊತೆಗಿನ ಭೇಟಿ ಕುರಿತು ಜೈಶಂಕರ್ ಅವರು ‘ಎಕ್ಸ್’ ವೇದಿಕೆಯಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

20ನೇ ಆಸಿಯಾನ್–ಇಂಡಿಯಾ ಶೃಂಗಸಭೆ ಹಾಗೂ 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.