ಬೀಜಿಂಗ್: ಪೂರ್ವ ಚೀನಾ ಸಮುದ್ರದಲ್ಲಿನ ವಿವಾದಿತ ಸೆಂಕಾಕು ದ್ವೀಪಗಳನ್ನು ತನ್ನ ಭೂಪ್ರದೇಶದ ಭಾಗವಾಗಿ ಸೇರ್ಪಡೆ ಮಾಡಿಕೊಂಡು ಹೊಸ ‘ನಕ್ಷೆ’ ಪ್ರಕಟಿಸಿರುವ ಚೀನಾದ ವಿರುದ್ಧ ಜಪಾನ್ ಪ್ರತಿಭಟನೆ ದಾಖಲಿಸಿದೆ.

ಈಗಾಗಲೇ ಚೀನಾದ ಹೊಸ ನಕ್ಷೆ ವಿರುದ್ಧ ಪ್ರತಿಭಟನೆ ದಾಖಲಿಸಿರುವ ಭಾರತ, ಫಿಲಿಪ್ಪೀನ್ಸ್, ಮಲೇಷ್ಯಾ, ವಿಯೆಟ್ನಾಂ, ತೈವಾನ್ ಜೊತೆಗೆ ಇದೀಗ ಜಪಾನ್ ಸಹ ಕೈಜೋಡಿಸಿದೆ.

ಹಿಂದಿನ ತಿಂಗಳು ಬೀಜಿಂಗ್ ಬಿಡುಗಡೆ ಮಾಡಿದ ಹೊಸ ನಕ್ಷೆಯ ಕುರಿತಂತೆ ಜಪಾನ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾಕ್ಕೆ ಬಲವಾದ ಪ್ರತಿಭಟನೆ ಸಲ್ಲಿಸಿದೆ ಎಂದು ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಹಿರೊಕಾಝು ಮತ್ಸುನೊ ಟೋಕಿಯೊದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.