ನವದೆಹಲಿ: ಭಾರತ–ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ವಾರ ಹಿಂದೂ ಸಮುದಾಯದೊಂದಿಗೆ ದೀಪಾವಳಿ ಆಚರಿಸಲಾಗಿದೆ. ಈ ವಿಶೇಷ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ’ ಎಂದು ಎಕ್ಸ್ನಲ್ಲಿ ಟ್ರುಡೊ ಹೇಳಿದ್ದಾರೆ.

ಇದೇ ವೇಳೆ ಕೈಗೆ ಕಟ್ಟಿರುವ ಕೆಂಪು ದಾರವನ್ನು ಪ್ರದರ್ಶಿಸಿರುವ ಅವರು, ‘ಕಳೆದ ಕೆಲವು ದಿನಗಳಲ್ಲಿ ಕೆನಡಾದ ಮೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಈ ದಾರಗಳನ್ನು ಕಟ್ಟಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಇವುಗಳಿಗೆ ಅದರದ್ದೇ ಆದ ಮಹತ್ವವಿದ್ದು, ಅವಾಗಿಯೇ ಕಳಚುವವರೆಗೆ ನಾನು ಅವುಗಳನ್ನು ಬಿಚ್ಚುವುದಿಲ್ಲ’ ಎಂದು ಹೇಳಿದ್ದಾರೆ.

ಅಲ್ಲಿದ್ದ ವ್ಯಾಪಾರಿಯೊಬ್ಬರು ದೀಪಾವಳಿಯ ವಿಶೇಷ ತಿನಿಸು ಜಿಲೇಬಿಯನ್ನು ಟ್ರುಡೊ ಅವರಿಗೆ ಸವಿಯಲು ನೀಡಿದ್ದು, ನಮ್ಮ ತಂಡದವರಿಗೂ ಇದನ್ನು ನೀಡುತ್ತೇನೆ ಎಂದು ಟ್ರುಡೊ ಹೇಳಿದ್ದಾರೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದಲ್ಲಿ ಒಡಕು ಮೂಡಿದ್ದು, ಆರೋಪ–ಪ್ರತ್ಯಾರೋಪಗಳು ಕೇಳಿಬಂದಿವೆ. ನಿಜ್ಜರ್ ಹತ್ಯೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾ ಇತ್ತೀಚೆಗೆ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.