ಇಸ್ಲಾಮಾಬಾದ್: ‘ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿದ ತೀರ್ಪಿನ ಅನುಸಾರ ನಡೆಯುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಭಾನುವಾರ ಹೇಳಿದೆ.

ಪಾಕಿಸ್ತಾನದ ಮಿಲಿಟರಿ ಕೋರ್ಟ್‌ನಿಂದ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ತೆರೆಮರೆಯ ಯತ್ನ ನಡೆಯುತ್ತಿದೆ. ಅಗತ್ಯ ಬಿದ್ದರೆ ಮತ್ತೆ ಐಸಿಜೆ ಮೊರೆ ಹೋಗಲಾಗುವುದು ಎಂಬ ಭಾರತದ ಪರ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಹೇಳಿಕೆಗೆ ಪ್ರತಿಯಾಗಿ ಪಾಕಿಸ್ತಾನ ಈ ಸ್ಪಷ್ಟನೆ ನೀಡಿದೆ.

‘ಹರೀಶ್ ಸಾಳ್ವೆ ಅವರ ಹೇಳಿಕೆ ನಿರಾಧಾರ ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ. ಜಾಧವ್ ಅವರಿಗೆ ಕಾನ್ಸುಲರ್ ಸಂಪರ್ಕವನ್ನೂ ಒದಗಿಸಲಾಗಿದೆ. ಐಸಿಜೆ ತೀರ್ಪಿನ ಪ್ರಕಾರವೇ ಜಾಧವ್ ಪ್ರಕರಣದ ಮರುಪರಿಶೀಲನೆ ನಡೆಸಲಾಗುವುದು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಆಯಿಷಾ ಫಾರೂಖಿ ಹೇಳಿದ್ದಾರೆ.

2016ರ ಮಾರ್ಚ್ 3ರಂದು ಇರಾನ್ ಗಡಿ ಮೂಲಕ ಜಾಧವ್ ಬಲೂಚಿಸ್ತಾನ ಪ್ರವೇಶಿಸಿದ್ದರು ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.