ಮಾಲೆ: ಮಾಲ್ದೀವ್ಸ್ನ ರಾಜಧಾನಿ ಮಾಲೆಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಭಾರತದ ಪರ ಒಲವು ಹೊಂದಿರುವ ಮಾಲ್ದೀವಿಯನ್ ಡೆಮಾಕ್ರಮಿಕ್ ಪಾರ್ಟಿ (ಎಂಡಿಪಿ) ಅಭೂತಪೂರ್ವ ಗೆಲುವು ಸಾಧಿಸಿದೆ.

ಇದರೊಂದಿಗೆ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್ಸಿ) ಪಕ್ಷಕ್ಕೆ ಹಿನ್ನಡೆಯಾಗಿದೆ.

ಭಾರತದ ಪರ ಒಲವು ಹೊಂದಿರುವ ಮಾಜಿ ಅಧ್ಯಕ್ಷ ಮೊಹಮ್ಮದ್ ಸಾಲಿಹ್ ಅವರ ಪಕ್ಷದ ಅಭ್ಯರ್ಥಿ ಆದಂ ಅಜೀಮ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಪಿಎನ್ಸಿ ಪಕ್ಷದ ಐಶಾತ್ ಅಜಿಮಾ ಶಕೂರ್ಗೆ ಸೋಲಾಗಿದೆ.
.ಮಾಲ್ದೀವ್ಸ್ ಸಣ್ಣ ರಾಷ್ಟ್ರ ಇರಬಹುದು, ಬೆದರಿಕೆಗೆ ಜಗ್ಗಲ್ಲ: ಮೊಹಮ್ಮದ್ ಮುಯಿಜು.ವಿದೇಶ ವಿದ್ಯಮಾನ: ಮಾಲ್ದೀವ್ಸ್– ಭಾರತದಿಂದ ದೂರ.. ಚೀನಾಕ್ಕೆ ಹತ್ತಿರ!.
ಭಾರತ ಹಾಗೂ ಮಾಲ್ದೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿರುವ ಬೆನ್ನಲ್ಲೇ ಚೀನಾ ಪರ ಒಲವು ಹೊಂದಿರುವ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಪಕ್ಷಕ್ಕೆ ಮಾಲೆ ಮೇಯರ್ ಚುನಾವಣೆಯಲ್ಲಿ ಹಿನ್ನಡೆಯಾಗಿದೆ.

ಕಳೆದ ವರ್ಷ ನಡೆದ ಮಾಲ್ದೀವ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊಹಮ್ಮದ್ ಮುಯಿಜು ಅವರು ಮಾಜಿ ಅಧ್ಯಕ್ಷ ಮೊಹಮ್ಮದ್ ಸಾಲಿಹ್ ಅವರನ್ನು ಪರಾಭವಗೊಳಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಕ್ಕಾಗಿ ಮುಯಿಜು ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.