ಕಠ್ಮಂಡು: ಕ್ರಿಸ್ಮಸ್ ಆಚರಣೆ ವೇಳೆ ಪ್ಲಾಸ್ಟಿಕ್ನಿಂದ ತಯಾರಿಸಿದ ಕ್ರಿಸ್ಮಸ್ ಟ್ರೀ ಮತ್ತು ಹೂವುಗಳನ್ನು ಅಲಂಕಾರದ ಉದ್ದೇಶಗಳಿಗಾಗಿ ಬಳಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದರು. ಈ ಹಿನ್ನೆಲೆಯಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸೋಮವಾರ ಪ್ಲಾಸ್ಟಿಕ್ ಮುಕ್ತ ಕ್ರಿಸ್ಮಸ್ ಆಚರಿಸಲಾಗಿದೆ.

ನೇಪಾಳದ ಅತಿದೊಡ್ಡ ಚರ್ಚ್ ಲಲಿತ್ಪುರ ಜಿಲ್ಲೆಯ ಭನಿಮಂಡಲದಲ್ಲಿರುವ ಅಸಂಪ್ಷನ್ ಚರ್ಚ್ನಲ್ಲಿ ಪ್ಲಾಸ್ಟಿಕ್ ಬದಲಿಗೆ ನೈಸರ್ಗಿಕ ಕ್ರಿಸ್ಮಸ್ ಟ್ರೀಯಿಂದ ಅಲಂಕರಿಸಲಾಗಿತ್ತು. ಅದೇ ರೀತಿ ಹೋಟೆಲ್, ರೆಸ್ಟೊರೆಂಟ್ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಪ್ಲಾಸ್ಟಿಕ್ ಟ್ರೀಗಳನ್ನು ಅಳವಡಿಸಿಲ್ಲ.

‘ಈ ಹಿಂದೆ ಪ್ಲಾಸ್ಟಿಕ್ನಿಂದ ತಯಾರಿಸಿದ ಕ್ರಿಸ್ಮಸ್ ಟ್ರೀಗಳನ್ನು ಇರಿಸಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕಠ್ಮಂಡು ಮಹಾನಗರದಲ್ಲಿ ಕ್ರಿಸ್ಮಸ್ ಹಬ್ಬದ ವೇಳೆ ಪ್ಲಾಸ್ಟಿಕ್ ಟ್ರೀ ಮತ್ತು ಹೂವುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಹಾಗಾಗಿ ಕಠ್ಮಂಡು ಸೇರಿದಂತೆ ಅಕ್ಕಪಕ್ಕದ ನಗರಗಳಲ್ಲಿ ಯಾವುದೇ ಪ್ಲಾಸ್ಟಿಕ್ ಕ್ರಿಸ್ಮಸ್ ಟ್ರೀ ಕಾಣಿಸಿಕೊಂಡಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಸ್ಮಸ್ ಹಿನ್ನೆಲೆ ಸೋಮವಾರ ಕಠ್ಮಂಡುವಿನ ನೇಪಾಳ ಅಕಾಡೆಮಿ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಠ್ಮಂಡು, ಲಲಿತ್ಪುರ ಮತ್ತು ಭಕ್ತಪುರದ ಕ್ರೈಸ್ತರು ಒಂದುಗೂಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಉಪಸಭಾಪತಿ ಇಂದಿರಾ ರಾಣಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಠ್ಮಂಡುವಿನ ಪ್ರವಾಸಿ ಕೇಂದ್ರ ಥಾಮೆಲ್ ಪ್ರದೇಶದಲ್ಲಿ ಕ್ರಿಸ್ಮಸ್ ಆಚರಣೆ ಹಿನ್ನೆಲೆ ಭಾರಿ ಜನಸಂದಣಿ ಇತ್ತು.
.ಕ್ರಿಸ್ಮಸ್: ಪುರಿ ಬೀಚ್ನಲ್ಲಿ ಮರಳು, ಈರುಳ್ಳಿಯಲ್ಲಿ ಮೂಡಿದ ಸೆಂಟಾ ಕ್ಲಾಸ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.