ಅಬುಜಾ: ‘ಅನಾರೋಗ್ಯದಿಂದ ತಾನು ಸಾವನ್ನಪ್ಪಿದ್ದು, ಸೂಡಾನ್‌ನಿಂದ ತದ್ರೂಪಿಯನ್ನು ಕರೆತಂದು ದೇಶದ ಅಧ್ಯಕ್ಷ ಹುದ್ದೆಗೆ ಕೂರಿಸಲಾಗಿದೆ’ ಎಂಬ ವದಂತಿಯನ್ನುನೈಜಿರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

‘ನಾನೇ ಇದನ್ನು ಭರವಸೆ ನೀಡುತ್ತೇನೆ. ಸದ್ಯದಲ್ಲೇ 76ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಮತ್ತಷ್ಟು ಗಟ್ಟಿಯಾಗಲಿದ್ದೇನೆ’ ಎಂದು ಪೋಲಂಡ್‌ನಲ್ಲಿ ನಡೆದ ನೈಜಿರಿಯಾ ಅನಿವಾಸಿಗಳ ಸಭೆಯಲ್ಲಿ ತಿಳಿಸಿದರು.

ಬುಹಾರಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅವರ ತದ್ರೂಪಿಯನ್ನು ಸೂಡಾನ್‌ನಿಂದ ತಂದು ಅಧ್ಯಕ್ಷ ಹುದ್ದೆಗೆ ಕೂರಿಸಲಾಗಿದೆ ಎಂದು ಟ್ವಿಟರ್, ಫೇಸ್‌ಬುಕ್ ಹಾಗೂ ಯೂಟ್ಯೂಬ್ ವಿಡಿಯೊಗಳಲ್ಲಿ ಸುದ್ದಿ ಹರಿದಾಡಿತ್ತು. ಈ ಕುರಿತಂತೆ ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

2017ರಲ್ಲಿ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದ್ದು, ಬುಹಾರಿ ಅವರು ಮತ್ತೊಂದು ಅವಧಿಗೆ ಪುನಾರಾಯ್ಕೆ ಬಯಸಿದ್ದಾರೆ. ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಕಾರಣ, ಲಂಡನ್‌ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.