ಮಾಸ್ಕೊ: ರಕ್ಷಣಾ ಮೈತ್ರಿ ಸಾಧಿಸಲು ವಾರದ ಆರಂಭದಲ್ಲಿ ರಷ್ಯಾಕ್ಕೆ ಭೇಟಿ ಕೊಟ್ಟಿದ್ದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಆರು ದಿನಗಳ ಪ್ರವಾಸವನ್ನು ಮುಗಿಸಿ ಭಾನುವಾರ ತಮ್ಮ ದೇಶಕ್ಕೆ ಮರಳಿದರು.

ತಮ್ಮ ವಿಶೇಷ ರೈಲಿನಲ್ಲಿ ರಷ್ಯಾದಿಂದ ಭಾನುವಾರ ಕಿಮ್ ಅವರು ನಿರ್ಗಮಿಸುವಾಗ ಅವರಿಗೆ ಪ್ರಿಮೊರಿ ಪ್ರದೇಶದ ಪ್ರಾದೇಶಿಕ ಗವರ್ನರ್ ಅವರು, ಸ್ಫೋಟಗೊಳ್ಳುವ ಐದು ಕಮಿಕೇಜ್ ಡ್ರೋನ್‌ಗಳು, ಬೇಹುಗಾರಿಕೆಯ ‘ಗೆರಾನ್–25’ ಡ್ರೋನ್, ಥರ್ಮಲ್ ಕ್ಯಾಮೆರಾಗಳಿಂದಲೂ ಪತ್ತೆಹಚ್ಚಲಾಗದ ವಿಶೇಷ ಉಡುಪುಗಳ ಮತ್ತು ಗುಂಡುನಿರೋಧಕ ಜಾಕೆಟ್‌ಗಳ ಒಂದು ಸೆಟ್ ಅನ್ನು ಉಡುಗೊರೆ ನೀಡಿದರು ಎಂದು ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ ‘ಟಾಸ್’ ವರದಿ ಮಾಡಿದೆ.

ಆರ್ಟಿಯೋಮ್-ಪ್ರಿಮೊರ್‌ಸ್ಕಿ–1 ನಿಲ್ದಾಣದಲ್ಲಿ ಕಿಮ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಅವರ ಗೌರವಾರ್ಥ ‘ಸ್ಲಾವಿಯಾಂಕಾ ವಿದಾಯ’ ಪರೇಡ್ ಕೂಡ ನಡೆಯಿತು. ರೈಲಿನಲ್ಲಿ ಹೊರಡುವ ಮೊದಲು ಕಿಮ್ ಅವರು ನೈಸರ್ಗಿಕ ಸಂಪನ್ಮೂಲಗಳ ಸಚಿವ ಅಲೆಕ್ಸಾಂಡರ್ ಕೊಜ್ಲೋವ್ ನೇತೃತ್ವದ ರಷ್ಯಾ ನಿಯೋಗಕ್ಕೆ ವಿದಾಯ ಹೇಳುತ್ತಿರುವ ದೃಶ್ಯದ ತುಣುಕನ್ನು ‘ರಿಯಾ ನೊವೊಸ್ಟಿ’ ಸುದ್ದಿ ಸಂಸ್ಥೆ ಪ್ರಸಾರ ಮಾಡಿದೆ.

ಪ್ರವಾಸದಲ್ಲಿ ಉಭಯ ನಾಯಕರ ಮಾತುಕತೆ ವೇಳೆ ಉತ್ತರ ಕೊರಿಯಾಕ್ಕೆ ಭೇಟಿ ಕೊಡುವಂತೆ ಕಿಮ್ ಅವರು ನೀಡಿರುವ ಆಮಂತ್ರಣವನ್ನು ಪುಟಿನ್ ಸ್ವೀಕರಿಸಿದ್ದಾರೆ. ಅಲ್ಲದೆ, ಬಾಹ್ಯಾಕಾಶಕ್ಕೆ ತಮ್ಮ ದೇಶದ ಗಗನಯಾತ್ರಿಯನ್ನು ಕಳುಹಿಸಿಕೊಡುವಂತೆ ಕಿಮ್ ಪ್ರಸ್ತಾಪಿಸಿದ ಕೋರಿಕೆಗೂ ಪುಟಿನ್ ಸಮ್ಮತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.