ನವದೆಹಲಿ: ಇಸ್ರೇಲ್ ಸೇನೆ– ಪ್ಯಾಲೆಸ್ಟೀನ್ ಉಗ್ರರ ನಡುವಿನ ಯುದ್ಧ ಮುಂದುವರಿದಿದ್ದು, ಗಾಜಾ ಪಟ್ಟಿಯಲ್ಲಿನ ಜನರ ಸ್ಥಿತಿ ಹೇಳ ತೀರದಾಗಿದೆ. ವಿದ್ಯುತ್, ಇಂಧನ, ಆಹಾರ, ನೀರಿನ ಸರಬರಾಜು ಇಲ್ಲದೆ ಜನರು ಪರದಾಡುತ್ತಿದ್ದಾರೆ.

ಹಮಾಸ್ ಬಂಡುಕೋರರ ವಿರುದ್ಧ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಈವರೆಗೆ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.
.Israel–Hamas war: ಸರ್ವಪಕ್ಷ ಸರ್ಕಾರ ರಚಿಸಿದ ಇಸ್ರೇಲ್.
ಈ ಬಗ್ಗೆ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ ವರದಿ ನೀಡಿರುವ ಪ್ರಕಾರ, ಜನನಿಬಿಡ ಪ್ರದೇಶವಾದ ಗಾಜಾ ಪಟ್ಟಣದಲ್ಲಿ ಜನರ ಸ್ಥಿತಿ ಭಯಾನಕವಾಗಿದೆ. 20 ಲಕ್ಷಕ್ಕೂ ಹೆಚ್ಚು ಜನ ಸಿಲುಕಿದ್ದಾರೆ ಎಂದು ಹೇಳಿದೆ.

ಅ.7 ರಿಂದ ಗಾಜಾ ಪಟ್ಟಿಯಲ್ಲಿ 1,100 ಜನ ಮೃತಪಟ್ಟಿದ್ದು 5 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ 12 ಸಿಬ್ಬಂದಿ ಹತ್ಯೆಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

ಈ ನಡುವೆ ಇಸ್ರೇಲ್ ಇಂಧನ ಸಚಿವ ಕಾಟ್ಸ್ ಅವರು, ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡವರನ್ನು ಹೊರಬಿಡುವವರೆಗೂ ಮೂಲಭೂತ ಸೌಕರ್ಯಗಳನ್ನು ಪೂರೈಸುವುದಿಲ್ಲ ಎಂದು ಹೇಳಿದ್ದಾರೆ.

ಅಪಹರಣಗೊಂಡ ಇಸ್ರೇಲಿಗರು ಮನೆಗೆ ಹಿಂದಿರುಗುವವರೆಗೆ ಗಾಜಾ ಪಟ್ಟಣದಲ್ಲಿ ಯಾವ ವಿದ್ಯುತ್ ಸ್ವಿಚ್ಗಳೂ ಆನ್ ಆಗುವುದಿಲ್ಲ, ಯಾವ ನಲ್ಲಿಗಳಲ್ಲೂ ನೀರು ಬರುವುದಿಲ್ಲ, ಜತೆಗೆ ಯಾವ ಇಂಧನ ವಾಹನಗಳೂ ನಗರವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
.Israeli–Palestinian conflict: ಗಾಜಾ ಪ್ರದೇಶ ಧ್ವಂಸಗೊಳಿಸಿದ ಇಸ್ರೇಲ್.ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ ಅಮೆರಿಕದ 22 ಮಂದಿ ಸಾವು: ಶ್ವೇತಭವನ.ಆಳ–ಅಗಲ: ಪ್ಯಾಲೆಸ್ಟೀನ್–ಇಸ್ರೇಲ್; ನೆಲೆ ಕಳೆದುಕೊಂಡವರ ನೆಲೆ ಇರದವರ ಕದನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.