ಸೋಲ್ (ಎ.ಪಿ): ‘ದಕ್ಷಿಣ ಕೊರಿಯಾ ಜೊತೆಗೂಡಿ ಗಡಿದಾಟುವ ಯತ್ನಕ್ಕೆ ಮುಂದಾದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕಾದಿತು’ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯವು ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿಯಾಗಿ ಸೇನಾ ಕಸರತ್ತು ನಡೆಸುತ್ತಿದ್ದು, ಎಫ್–35 ಒಳಗೊಂಡಂತೆ 200ಕ್ಕೂ ಹೆಚ್ಚು ಯುದ್ಧ ವಿಮಾನಗಳು ಈ ತಾಲೀಮಿನಲ್ಲಿ ಭಾಗಿಯಾಗಿವೆ. ಇದರ ಬೆನ್ನಲ್ಲೇ ಉತ್ತರ ಕೊರಿಯಾ ಈ ರೀತಿ ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾವು ಈ ವರ್ಷದಲ್ಲಿ ಪೂರ್ವಸಿದ್ಧತೆಯಾಗಿ ದಾಖಲೆ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ. ಅಲ್ಲದೆ, 40ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದು, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಇನ್ನೊಂದೆಡೆ, ಇದೇ ವರ್ಷದಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕೂಡಾ ಜಂಟಿಯಾಗಿ ದೊಡ್ಡಪ್ರಮಾಣದಲ್ಲಿ ಸೇನಾ ಕಸರತ್ತು ನಡೆಸಿವೆ. ಕೋವಿಡ್ ಮತ್ತು ಪರಿಸ್ಥಿತಿ ತಿಳಿಗೊಳಿಸಲು ರಾಜತಾಂತ್ರಿಕ ಮಾತುಕತೆ ಕಾರಣದಿಂದ ಹಿಂದಿನ ಎರಡು ವರ್ಷ ಈ ಕಸರತ್ತು ನಡೆದಿರಲಿಲ್ಲ.

ಮಂಗಳವಾರವೂ ಉತ್ತರ ಕೊರಿಯಾ ಎರಡು ಖಂಡಾಂತರ ಕ್ಷಿಪಣಿಗಳನ್ನು ಸಮುದ್ರವನ್ನು ಗುರಿಯಾಗಿಸಿ ಯಶಸ್ವಿಯಾಗಿ ಪ್ರಯೋಗಿಸಿದ್ದು, ಅದರ ಹಿಂದೆಯೇ ‘ತಕ್ಕ ಪ್ರತ್ಯುತ್ತರ ನೀಡುವ’ ಎಚ್ಚರಿಕೆಯನ್ನು ಅಮೆರಿಕಕ್ಕೆ ರವಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.