ಲಂಡನ್: ಭಾರತೀಯರ ಒಳ ಉಡುಪು ‘ಚಡ್ಡಿ’ ಎಂಬುದು ಭಾರತೀಯ ಇಂಗ್ಲಿಷ್ನಲ್ಲಿ ‘ಚಡ್ಡೀಸ್’. ಈಗ ಈ ಪದಕ್ಕೆ ‘ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ’ಯಲ್ಲಿ (ಒಇಡಿ) ಸ್ಥಾನ ನೀಡಲಾಗಿದೆ.

‘ಗುರುವಾರ ಬಿಡುಗಡೆ ಮಾಡಲಾಗಿರುವ ಅಪ್ಡೇಟ್ ಮಾಡಲಾದ ನಿಘಂಟಿನಲ್ಲಿ ಚಡ್ಡೀಸ್ ಸೇರಿದಂತೆ 650 ಹೊಸ ಪದಗಳನ್ನು ಸೇರಿಸಲಾಗಿದೆ. ಈ ಶಬ್ದಗಳನ್ನು ಅಧಿಕೃತವಾಗಿ ಇಂಗ್ಲಿಷ್ ಪದಗಳೆಂದು ಮಾನ್ಯತೆ ನೀಡಲಾಗಿದೆ’ ಎಂದು ಡಿಕ್ಷನರಿಯ ಹಿರಿಯ ಸಹಾಯಕ ಸಂಪಾದಕ ಜೋನಾಥನ್ ಡೆಂಟ್ ತಿಳಿಸಿದ್ದಾರೆ.

‘ಚಿಕ್ಕದಾದ ಪ್ಯಾಂಟ್. ಅದನ್ನು ಅಂಡರ್ವೇರ್, ಅಂಡರ್ ಪ್ಯಾಂಟ್’ ಎಂದು ಕರೆಯಲಾಗುತ್ತದೆ ಎಂದು ಈ ನಿಘಂಟಿನಲ್ಲಿ ಅರ್ಥ ನೀಡಲಾಗಿದೆ. 1990ರ ದಶಕದಲ್ಲಿ ಬಿಬಿಸಿಯಲ್ಲಿ ಪ್ರಸಾರವಾಗುತ್ತಿದ್ದ ‘ಗುಡ್ನೆಸ್ ಗ್ರೇಸಿಯಸ್ ಮಿ’ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ‘ಚಡ್ಡೀಸ್’ ಪದ ಬಳಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.