ಇಸ್ಲಾಮಾಬಾದ್: ರಾತ್ರಿಯಿಡೀ ಚರ್ಚೆ ಬಳಿಕ ವಿವಾದಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದೆ. ಈ ಮೂಲಕ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಅಧಿಕಾರಾವಧಿಯನ್ನು 3 ವರ್ಷಕ್ಕೆ ನಿಗದಿ ಮಾಡಲಾಗಿದೆ.

ನ್ಯಾಯಮೂರ್ತಿಗಳ ಅಧಿಕಾರ ಕಡಿತಗೊಳಿಸುವ ಸಂವಿಧಾನದ 26ನೇ ತಿದ್ದುಪಡಿ ಮಸೂದೆಯು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಕ್ಕೆ ತಣ್ನೀರೆರಚುತ್ತದೆ ಎಂದು ವಿಪಕ್ಷಗಳು ದೂರಿದ್ದವು.

ಬೆಳಗಿನ ಜಾವ 5 ಗಂಟೆ ಸುಮಾರಿಗೆ 336 ಸದಸ್ಯ ಬಲದ ರಾಷ್ಟ್ರೀಯ ಸಂಸತ್ತಿನಲ್ಲಿ 225 ಮಂದಿ ತಿದ್ದುಪಡಿ ಪರ ಚಲಾಯಿಸಿದರು.

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮತ್ತು ಸುನ್ನಿ-ಇತ್ತೆಹಾದ್ ಕೌನ್ಸಿಲ್ (ಎಸ್ಐಸಿ) ತಿದ್ದುಪಡಿಯನ್ನು ವಿರೋಧಿಸಿದ್ದವು. ಆದರೆ, ಪಿಟಿಐ ಬೆಂಬಲದಲ್ಲಿ ಗೆದ್ದಿದ್ದ ಆರು ಸ್ವತಂತ್ರ ಸದಸ್ಯರು ಮಸೂದೆ ಪರ ಮತ ಚಲಾಯಿಸಿದರು. ತಿದ್ದುಪಡಿಯನ್ನು ಅಂಗೀಕರಿಸಲು ಸರ್ಕಾರಕ್ಕೆ 224 ಮತಗಳ ಅಗತ್ಯವಿತ್ತು.

ಭಾನುವಾರ ರಾತ್ರಿ ಸೆನೆಟ್ ಅಗತ್ಯ ಮೂರನೇ ಎರಡರಷ್ಟು ಬಹುಮತದೊಂದಿಗೆ ತಿದ್ದುಪಡಿಯನ್ನು ಅನುಮೋದಿಸಿತ್ತು. ಮಸೂದೆ ಪರ 65 ಮತ ಬಿದ್ದರೆ, 4 ಮತಗಳು ಮಾತ್ರ ವಿರುದ್ಧವಾಗಿ ಬಿದ್ದಿದ್ದವು.

ಸಂಸತ್ತಿನ ಉಭಯ ಸದನಗಳಲ್ಲೂ ಸಂವಿಧಾನದ (ಇಪ್ಪತ್ತಾರನೇ ತಿದ್ದುಪಡಿ) ಕಾಯ್ದೆ 2024 ಅಂಗೀಕಾರವಾಗಿದ್ದು, ಪಾಕಿಸ್ತಾನದ ಸಂವಿಧಾನದ 75ನೇ ವಿಧಿಯ ಅಡಿ ಒಪ್ಪಿಗೆಗಾಗಿ ಅಧ್ಯಕ್ಷರಿಗೆ ಕಳುಹಿಸಲಾಗುತ್ತದೆ. ಅವರ ಅಂಕಿತ ಬಿದ್ದ ಬಳಿಕ ತಿದ್ದುಪಡಿ ಜಾರಿಗೆ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.