ಇಸ್ಲಾಮಾಬಾದ್: ಆಕ್ಷೇಪಾರ್ಹ ಅಥವಾ ಧರ್ಮನಿಂದನೆಯ ಮಾಹಿತಿ ತೆಗೆದುಹಾಕದ ಕಾರಣ, ಆನ್‌ಲೈನ್ ವಿಶ್ವಕೋಶ ‘ವಿಕಿಪೀಡಿಯಾ’ವನ್ನು ಪಾಕಿಸ್ತಾನ ನಿರ್ಬಂಧಿಸಿದೆ ಎಂದು ಪಾಕ್‌ನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಶನಿವಾರ ತಿಳಿಸಿದೆ.

48 ಗಂಟೆಗಳ ಕಾಲ ವಿಕಿಪೀಡಿಯಾ ಸೇವೆಯನ್ನು ಅಮಾನತ್ತಿನಲ್ಲಿಟ್ಟಿದ್ದ ಪಿಟಿಎ, ಆಕ್ಷೇಪಾರ್ಹ ಮಾಹಿತಿಯನ್ನು ತೆಗೆಯದಿದ್ದರೆ ಸೇವೆಯನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯನ್ನು ವಿಕಿಪೀಡಿಯಾ ಪಾಲಿಸದ ಕಾರಣ ನಿರ್ಬಂಧ ಹೇರಲಾಗಿದೆ. ಆಕ್ಷೇಪಾರ್ಹ ಮಾಹಿತಿಯನ್ನು ವಿಕಿಪೀಡಿಯಾ ತೆಗೆದ ಬಳಿಕ ಈ ನಿರ್ಧಾರವನ್ನು ಪುನರ್‌ವಿಮರ್ಶೆಗೆ ಒಳಪಡಿಸಲಾಗುವುದು ಎಂದು ಪಿಟಿಎ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಕಿಪೀಡಿಯಾ ಫೌಂಡೇಷನ್, ‘ವಿಕಿಪೀಡಿಯಾದಲ್ಲಿ ಯಾವ ಮಾಹಿತಿ ಸೇರಿಸಲಾಗಿದೆ ಅಥವಾ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ನಿರ್ಧರಿಸಿಲ್ಲ’ ಎಂದು ತಿಳಿಸಿದೆ.

ವಿಕಿಪೀಡಿಯಾ ತಾಣದಲ್ಲಿ ಯಾವ ಮಾಹಿತಿಯನ್ನು ಪಡೆಯಲು ಹೆಚ್ಚಿನ ಜನರು ಆಸಕ್ತಿ ತೋರುತ್ತಾರೊ ಅಂಥ ಮಾಹಿತಿಗಳು ತಾಣದಲ್ಲಿ ಪ್ರಕಟವಾಗುತ್ತವೆ. ಇವು ಹೆಚ್ಚಾಗಿ ನಿಷ್ಪಕ್ಷಪಾತ ಮಾಹಿತಿ ಆಗಿರುತ್ತವೆ. ಪಾಕಿಸ್ತಾನದ ಜನರಿಗೆ ವಿಕಿಪೀಡಿಯಾ ಮತ್ತು ವಿಕಿಮೀಡಿಯಾಗಳ ಲಭ್ಯವಾಗುತ್ತಿಲ್ಲ ಎಂದು ಆಂತರಿಕ ವರದಿಗಳಿಂದ ಶುಕ್ರವಾರ ತಿಳಿಯಿತು. ಪಾಕಿಸ್ತಾನದ ಜನರಿಗೆ ಮಾಹಿತಿಗಳು ಉಚಿತವಾಗಿ ಲಭ್ಯವಾಗುವ ನಿಟ್ಟಿನಲ್ಲಿ ಸರ್ಕಾರವು ವಿಕಿಪೀಡಿಯಾ ಫೌಂಡೇಷನ್ ಜೊತೆ ಕೈಜೋಡಿಸುತ್ತದೆ ಎಂಬ ವಿಶ್ವಾಸವಿದೆ ಎಂದು ವಿಕಿಪೀಡಿಯಾ ಹೇಳಿದೆ.

ಧರ್ಮನಿಂದನೆ ಕಾರಣ ನೀಡಿ ಪಾಕಿಸ್ತಾನವು ಈ ಹಿಂದೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಯುಟ್ಯೂಬ್ ಅನ್ನು ನಿರ್ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.