ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವರಾಗಿ ಸಿಖ್ ಸಮುದಾಯದ ಸರ್ದಾರ್ ರಮೇಶ್ ಸಿಂಗ್ ಅರೋರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಾಕಿಸ್ತಾನದಲ್ಲಿ ಸಚಿವಗಾದಿಗೇರಿದ ಸಿಖ್ ಸಮುದಾಯದ ಮೊದಲ ಸಚಿವರು ಎಂಬ ಖ್ಯಾತಿಗೂ ರಮೇಶ್ ಪಾತ್ರರಾಗಿದ್ದಾರೆ.

ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್–ಎನ್) ಪಕ್ಷದ ಅರೋರಾ ಫೆಬ್ರುವರಿ 8 ರಂದು ನಡೆದ ಪ್ರಾಂತೀಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ 3ನೇ ಬಾರಿಗೆ ಶಾಸಕರಾಗಿ ಆಯ್ರೆಯಾಗಿದ್ದರು.

49 ವರ್ಷದ ಅರೋರಾ, ಪಾಕಿಸ್ತಾನ ಗುರುದ್ವಾರ ಪ್ರಭಂದಕ ಸಮಿತಿಯ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಕರ್ತಾರ್ಪುರ ಕಾರಿಡಾರ್ನ ರಾಯಭಾರಿಯಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.

ಬುಧವಾರ, 17 ಸಚಿವರ ಜೊತೆಗೆ ಅರೋರಾ ಸಹ ಪ್ರಮಾಣ ವಚನ ಸ್ವೀಕರಿಸಿದ್ದರು.

ಸಿಎಂ ಮರ್ಯಮ್ ನವಾಜ್ ನೇತೃತ್ವದ ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತರ ಖಾತೆಯನ್ನು ಅರೋರಾ ಅವರಿಗೆ ನೀಡಲಾಗಿದೆ. ಅರೋರಾ ಸಹೋದರರುಸಹ ಕರ್ತಾರ್ಪುರ ಕಾರಿಡಾರ್ ಅನ್ನು ನೋಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.