ಲಾಹೋರ್: ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪ ಸಂಬಂಧ, ಜೈಷ್–ಎ– ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಗುರುವಾರ ಬಂಧನ ವಾರಂಟ್ ಹೊರಡಿಸಿದೆ.

ಗುಜ್ರಾನ್ವಾಲಾ ನಗರದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಪ್ರಕರಣದ ವಿಚಾರಣೆ ನಡೆಸಿತು.

ತಕ್ಷಣವೇ ಮಸೂದ್ ಅಜರ್ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಭಯೋತ್ಪಾದನಾ ನಿಗ್ರಹ ಇಲಾಖೆಗೆ (ಸಿಟಿಡಿ) ನ್ಯಾಯಾಧೀಶರಾದ ನತಾಶಾ ನಸೀಮ್ ಸುಪ್ರಾ ಸೂಚಿಸಿದ್ದಾರೆ.

ಜೆಇಎಂ ಮುಖ್ಯಸ್ಥರು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಮತ್ತು ಜಿಹಾದಿ ಪುಸ್ತಕಗಳ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಟಿಡಿ ನ್ಯಾಯಾಧೀಶರಿಗೆ ಮಾಹಿತಿ ನೀಡಿದೆ.

ಅಜರ್ ತನ್ನ ಹುಟ್ಟೂರು ಬಹವಾಲ್ಪುರದ ಗೋಪ್ಯ ಸ್ಥಳದಲ್ಲಿ ಅಡಗಿಕೊಂಡಿದ್ದಾನೆ ಎನ್ನಲಾಗಿದೆ. ಮುಂಬೈ ದಾಳಿ ಮತ್ತು ಪುಲ್ವಾಮ ದಾಳಿಯ ಪ್ರಮುಖ ಸಂಚುಕೋರ ಈತ. ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿ ಸೇರಿದಂತೆ ಐದು ಭಯೋತ್ಪಾದನಾ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿರುವ ‘ಮೋಸ್ಟ್ ವಾಟೆಂಡ್’ ಉಗ್ರ. 2019 ಮೇ 1ರಂದು ವಿಶ್ವಸಂಸ್ಥೆಯು ಆತನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.