ನ್ಯೂಯಾರ್ಕ್: ವಿಶ್ವದ ಎರಡನೆ ಅತಿದೊಡ್ಡ ಆಹಾರ ಮತ್ತು ತಂಪು ಪಾನೀಯ ಸಂಸ್ಥೆ ಪೆಪ್ಸಿ ಕಂಪನಿಯ ಸಿಇಒ ಹುದ್ದೆಯಿಂದ ಭಾರತ ಸಂಜಾತೆ ಇಂದ್ರಾ ನೂಯಿ (62) ಅವರು ಕೆಳಗೆ ಇಳಿಯಲಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ.

ಸಂಸ್ಥೆಯ ಜತೆಗಿನ ಅವರ 24 ವರ್ಷಗಳ ಒಡನಾಟವು ಇದೇ ಅಕ್ಟೋಬರ್ 3ಕ್ಕೆ ಕೊನೆಗೊಳ್ಳಲಿದೆ. 2019ರ ಕೆಲ ತಿಂಗಳವರೆಗೆ ಸಂಸ್ಥೆಯ ಅಧ್ಯಕ್ಷೆ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಇಂದ್ರಾ ಅವರು ಹುದ್ದೆ ತೊರೆಯುವುದಕ್ಕೆ ಕಾರಣ ಏನು ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಸಂಸ್ಥೆಯ ನಿರ್ದೇಶಕ ಮಂಡಳಿಯು ನೂಯಿ ಅವರ ಉತ್ತರಾಧಿಕಾರಿಯನ್ನಾಗಿ ಸಂಸ್ಥೆಯ ಅಧ್ಯಕ್ಷ ರೇಮನ್ ಲಗುರ್ತಾ ಅವರನ್ನು ನೇಮಿಸಿದೆ.

‘ಭಾರತದಲ್ಲಿ ಹುಟ್ಟಿ ಬೆಳೆದ ನಾನು ಇಂತಹ ಅಸಾಮಾನ್ಯ ಸಂಸ್ಥೆಯನ್ನು ಮುನ್ನಡೆಸುವೆ ಎಂದು ಯಾವತ್ತೂ ಕನಸು ಕಂಡಿರಲಿಲ್ಲ. ನನ್ನ ಹುದ್ದೆಯಲ್ಲಿ ನಾನು ಸಾಧಿಸಿರುವ ಯಶಸ್ಸಿನ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ನೂಯಿ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಪಾಲಿಗೆ ಈ ದಿನ ಸಮ್ಮಿಶ್ರ ಭಾವನೆಗಳ ದಿನವಾಗಿದೆ. 24 ವರ್ಷಗಳ ಕಾಲ ಪೆಪ್ಸಿಕೊ ನನ್ನ ಜೀವನವೇ ಆಗಿತ್ತು. ನನ್ನ ಹೃದಯ ಸದಾಕಾಲ ಇಲ್ಲಿ ಇರಲಿದೆ. ಪೆಪ್ಸಿಕೊದ ಪಾಲಿಗೆ ಅತ್ಯುತ್ತಮ ದಿನಗಳು ಇನ್ನೂ ಬರಬೇಕಾಗಿದೆ’ ಎಂದು ಹೇಳಿದ್ದಾರೆ.

ಭಾರತದಲ್ಲಿ ಜನಿಸಿ ಜಾಗತಿಕ ದೈತ್ಯ ಸಂಸ್ಥೆ ಮುನ್ನಡೆಸಿ ಇತಿಹಾಸ ನಿರ್ಮಿಸಿದ ಹೆಗ್ಗಳಿಕೆ ಇವರದ್ದಾಗಿದೆ. ವಿಶ್ವದ ಅತ್ಯಂತ ಪ್ರಭಾವಿ ಉದ್ಯಮ ಮುಖ್ಯಸ್ಥೆಯರಲ್ಲಿಯೂ ಇವರು ಒಬ್ಬರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.