ನ್ಯೂಯಾರ್ಕ್: ‘ಛಾಯಾಗ್ರಾಹಕನೊಬ್ಬ ಯುವರಾಜ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್ ಪ್ರಯಾಣಿಸುತ್ತಿದ್ದ ಕಾರನ್ನು ಸುಮಾರು ಎರಡು ಗಂಟೆಗಳ ಕಾಲ ಬೆನ್ನಟ್ಟಿದ್ದ. ಇದರಿಂದಾಗಿ ದುರಂತವೊಂದು ಸಂಭವಿಸುವ ಸಾಧ್ಯತೆ ಇತ್ತು’ ಎಂದು ದಂಪತಿಯ ವಕ್ತಾರರೊಬ್ಬರು ಬುಧವಾರ ತಿಳಿಸಿದ್ದಾರೆ.

‘ಹ್ಯಾರಿ, ಮೇಘನ್ ಹಾಗೂ ಅವರ ತಾಯಿ ಡೋರಿಯಾ ರೇಗಲಾಂಡ್ ಅವರು ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಿಗದಿಯಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಛಾಯಾಗ್ರಾಹಕನ ವರ್ತನೆಯಿಂದಾಗಿ ಹ್ಯಾರಿ, ಮೇಘನ್ ಹಾಗೂ ಡೋರಿಯಾ ಅಪಾಯಕ್ಕೆ ಸಿಲುಕಬೇಕಾಗಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.