ವಾಷಿಂಗ್ಟನ್ / ಕ್ಯಾನ್ಬೆರಾ (ಪಿಟಿಐ): ಖಾಲಿಸ್ತಾನ ಪರ ಪ್ರತಿಭಟನಕಾರರ ಗುಂಪೊಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿ ಮೇಲೆ ಭಾನುವಾರ ದಾಳಿ ನಡೆಸಿದೆ.

ಪೊಲೀಸರು ತಡೆದ ಹೊರತಾಗಿಯೂ ಖಾಲಿಸ್ತಾನ ಪರ ಘೋಷಣೆ ಕೂಗುತ್ತಾ ನುಗ್ಗಿದ ಪ್ರತಿಭಟನಾಕಾರರು, ಕಾನ್ಸುಲೇಟ್ ಕಚೇರಿ ಆವರಣದಲ್ಲಿ ‘ಖಾಲಿಸ್ತಾನ ಧ್ವಜ’ವನ್ನು ಹಾರಿಸಿದರು. ಕಚೇರಿಯ ಸಿಬ್ಬಂದಿ ಕೂಡಲೇ ಧ್ವಜವನ್ನು ತೆಗೆದುಹಾಕಿದರು.

ಅನಂತರ ಉದ್ರಿಕ್ತ ಗುಂಪು ಕಬ್ಬಿಣದ ರಾಡು ಬಳಸಿ ಕಚೇರಿಯ ಬಾಗಿಲು ಮತ್ತು ಕಿಟಕಿಗಳನ್ನು ಒಡೆದಿದೆ.

ಘಟನೆಯನ್ನು ಖಂಡಿಸಿರುವ ಭಾರತೀಯ ಅಮೆರಿಕನ್ನರು ತಪ್ಪಿಸ್ಥರ ವಿರುದ್ಧ ತತ್ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯವಾಗಿರುವುದು ಆಘಾತ ಉಂಟುಮಾಡಿದೆ’ ಎಂದು ಭಾರತ ಮತ್ತು ಭಾರತೀಯ ವಲಸೆಗಾರರ ಅಧ್ಯಯನ ಫೌಂಡೇಷನ್ (ಎಫ್ಐಐಡಿಎಸ್) ಹೇಳಿದೆ.

‘ಸಿಖ್ಖ್ ಪ್ರತ್ಯೇಕತಾವಾದಿಗಳ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಪ್ರಚೋದನೆ ಇದೆ’ ಎಂದು ಎಫ್ಐಐಡಿಎಸ್ ತಿಳಿಸಿದೆ.

‘ಈ ಹಿಂಸಾತ್ಮಕ ದಾಳಿಯು ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಸಂಬಂಧಕ್ಕೆ ಬೆದರಿಕೆಯಾಗಿದೆ. ಅಷ್ಟೇ ಅಲ್ಲದೆ, ನಮ್ಮ ಸಮುದಾಯದ ಶಾಂತಿ ಮತ್ತು ಸೌಹಾರ್ದತೆಯ ಮೇಲಿನ ದಾಳಿಯಾಗಿದೆ’ ಎಂದು ಸಮುದಾಯದ ನಾಯಕ ಅಜಯ್ ಭುಟೋರಿಯಾ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಘಟನೆ ಬಗ್ಗೆ ಸ್ಯಾನ್ಫ್ರಾನ್ಸಿಸ್ಕೊ ಪೊಲೀಸರು ತಕ್ಷಣಕ್ಕೆ ಯಾವುದೇ ಹೇಳಿಕೆ ನೀಡಿಲ್ಲ.

ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆ:

ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್ಪಾಲ್ ಸಿಂಗ್ ಮತ್ತು ಆತನ ಸಹಚರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದನ್ನು ಖಂಡಿಸಿ ಖಾಲಿಸ್ತಾನ ಸಂಘಟನೆಯ ಬೆಂಬಲಿಗರು ಆಸ್ಟ್ರೇಲಿಯಾದ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಲಂಡನ್ನಲ್ಲಿ ಭಾರತ ರಾಷ್ಟ್ರಧ್ವಜ ಕೆಳಗಿಳಿಸಿದ ಖಾಲಿಸ್ತಾನ ಬೆಂಬಲಿಗರು; ಓರ್ವ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.