ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾದಲ್ಲಿ ಭಾರಿ ಮಳೆ: 25 ಮಂದಿ ಸಾವು- ಹಲವರು ನಾಪತ್ತೆ

Published 22 ಜುಲೈ 2024, 12:33 IST
Last Updated 22 ಜುಲೈ 2024, 12:33 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸೇತುವೆಗಳು ಕುಸಿದಿದ್ದು, ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸೋಮವಾರವೂ ಶೋಧ ಕಾರ್ಯಾಚರಣೆ ನಡೆಯಿತು.

ಸಿಚುವಾನ್ ಪ್ರಾಂತ್ಯದ ಹಳ್ಳಿಯೊಂದು ಶನಿವಾರ ಮಧ್ಯರಾತ್ರಿ ದಿಢೀರ್ ಪ್ರವಾಹಕ್ಕೆ ತುತ್ತಾಗಿದ್ದು, 10 ಜನರು ಮೃತಪಟ್ಟಿದ್ದಾರೆ. ನಾಪತ್ತೆಯಾದ 29 ಜನರನ್ನು ಹುಡುಕಲಾಗುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದವರು ತಿಳಿಸಿದ್ದಾರೆ.

ಹನ್ಯುವಾನ್ ಕೌಂಟಿಯ ಕ್ಸಿನುವಾ ಗ್ರಾಮದ ಬಳಿ ಹರಿಯುವ ನದಿಯು ಉಕ್ಕೇರಿದ್ದು, 40 ಮನೆಗಳಿಗೆ ನೀರು ನುಗ್ಗಿದೆ. ಹಲವು ಸೇತುವೆಗಳು ಕುಸಿದಿವೆ. ರಸ್ತೆಗಳಿಗೆ ಹಾನಿಯಾಗಿದ್ದು ಸಂಪರ್ಕ ಕಡಿತಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶಾಂಕ್ಸಿ ಪ್ರಾಂತ್ಯದಲ್ಲಿ ಶುಕ್ರವಾರ ತಡರಾತ್ರಿ ಹೆದ್ದಾರಿಯ ಮೇಲ್ಸೆತುವೆಯೊಂದು ಕುಸಿದಿದ್ದರಿಂದ ಚಲಿಸುತ್ತಿದ್ದ ವಾಹನಗಳು ನದಿಗೆ ಬಿದ್ದಿದ್ದು, ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.

ಶನಿವಾರ 30 ಮಂದಿ ಹಾಗೂ 20 ಕಾರುಗಳು ನಾಪತ್ತೆಯಾಗಿವೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಕಳೆದ ಮೇ ತಿಂಗಳಲ್ಲಿ ಸಂಭವಿಸಿದ್ದ ಸೇತುವೆ ಕುಸಿತದಲ್ಲಿ 36 ಜನರು ಮೃತಪಟ್ಟಿದ್ದರು. ಈ ಘಟನೆಗಳು ಚೀನಾದಲ್ಲಿನ ಸೇತುವೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT