ಕ್ಯಾನ್ಬೆರಾ: ಜಗತ್ತಿನಲ್ಲಿ 7,000ಕ್ಕೂ ಅಧಿಕ ಭಾಷೆಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಭಾಷೆಗಳು ಅಳಿವಿನ ಸ್ಥಿತಿ ತಲುಪಿವೆ ಎಂಬ ಆಘಾತಕಾರಿ ಅಂಶವನ್ನು ‘ದಿ ಕಾನ್ವರ್ಸೇಷನ್‘ (the conversation) ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ.

ಪ್ರಪಂಚದಲ್ಲಿರುವ ವಿವಿಧ ಭಾಷೆಗಳ ವ್ಯಾಕರಣದಲ್ಲಿ ವೈವಿಧ್ಯತೆಗಳನ್ನು ಕಾಣಬಹುದಾಗಿದ್ದು, ಇದರ ಕುರಿತಾದ ಆಸಕ್ತಿಯಿಂದ ಭಾಷಾತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಭಾಷೆಯ ನೆರವಿನಿಂದ ಇತಿಹಾಸ ಪ್ರಜ್ಞೆಯ ಜತೆಗೆ ಪರಿಸರದ ಅರಿವು ಪಡೆದುಕೊಳ್ಳುವುದರಿಂದ ಮನುಷ್ಯನಾಗಿ ಬದುಕಲು ಸಹಕಾರಿಯಾಗಿದೆ ಎನ್ನುತ್ತಾರೆ ಸಂಶೋಧಕರು.

ಈ ಸಂಶೋಧನೆಯಲ್ಲಿ ತಿಳಿದುಬಂದ ಆತಂಕಕಾರಿ ಅಂಶವೆಂದರೆ ಪ್ರಪಂಚದಲ್ಲಿರುವ ಒಟ್ಟು ಭಾಷೆಗಳಲ್ಲಿ ಅರ್ಧದಷ್ಟು ಭಾಷೆಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳತ್ತಿವೆ.

ವ್ಯಾಕರಣಗಳು ಭಾಷೆಗಳಿಗೆ ಗಟ್ಟಿತನವನ್ನು ಕೊಡುತ್ತದೆ. ಆದರೆ, ಇಂದು ಆಯಾಯ ಭಾಷೆಯ ವ್ಯಾಕರಣದ ವಿವಿಧತೆಗೆ ಧಕ್ಕೆಯಾಗುತ್ತಿದೆ.

ಪ್ರಪಂಚದಲ್ಲಿನ ಭಾಷೆಗಳ ವ್ಯಾಕರಣವನ್ನು ನೋಡಿದರೆ, ಅನೇಕ ವೈಶಿಷ್ಟ್ಯಗಳು ಕಂಡುಬರುತ್ತವೆ ಇದಕ್ಕೆಲ್ಲಾ ಕಾಲದಿಂದ ಕಾಲಕ್ಕೆ ಬದಲಾಗುವ ಮನುಷ್ಯನ ಜಾಣ್ಮೆಯೇ ಕಾರಣ ಎಂದಿದೆ ವರದಿ.

ಒಂದು ನಿರ್ದಿಷ್ಟ ಭಾಷೆಯನ್ನು ಒಂದೇ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಮಾತನಾಡುವ ಜನ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಬಹುದು. ಪರಿಸರದ ಭಿನ್ನತೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಪ್ರಸ್ತುತ ಅಳಿವಿನಂಚಿನ ಭಾಷೆಗಳು ಕಣ್ಮರೆಯಾದರೆ ನಿರ್ದಿಷ್ಟವಾದ ಸಮುದಾಯಗಳಿರುವ ಪ್ರದೇಶಕ್ಕೆ ಈ ಪರಿಣಾಮ ತಗುಲಬಹುದು ಎಂದಿದೆ ವರದಿ.

ಇತರ ದೇಶಗಳಿಗೆ ಹೋಲಿಸಿದರೆ ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾದಂಥ ದೇಶಗಳಲ್ಲಿರುವ ಎಲ್ಲಾ ಸ್ಥಳೀಯ ಭಾಷೆಗಳು ತನ್ನ ವ್ಯಾಕರಣದ ವೈವಿಧ್ಯತೆಯನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿವೆ. ಅಲ್ಲಿನ ಎಲ್ಲಾ ಸ್ಥಳೀಯ ಭಾಷೆಗಳು ಅಪಾಯದಲ್ಲಿವೆ ಎಂದು ವರದಿ ತಿಳಿಸುತ್ತದೆ.

ಪೆಸಿಫಿಕ್, ಆಗ್ನೇಯ ಏಷ್ಯಾ ಮತ್ತು ಯುರೋಪ್ನಲ್ಲಿರುವ ಸ್ಥಳೀಯ ಭಾಷೆಗಳು ಪ್ರಪಂಚದ ಇತರ ಭಾಗಕ್ಕಿಂತ ಹೆಚ್ಚು ಸುರಕ್ಷಿತವಾಗಿವೆ. ಆದರೂ ಇಲ್ಲಿನ ಭಾಷೆಯ ಬಳಕೆಯಲ್ಲಿ ಶೇ 25 ರಷ್ಟು ಇಳಿಕೆ ಕಂಡುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ವಿಶ್ವಸಂಸ್ಥೆಯು 2022–32ರ ವರೆಗೆ ಸ್ಥಳೀಯ ಭಾಷೆಗಳ ದಶಕ ಎಂದು ಘೋಷಿಸಿದ್ದು, ಸ್ಥಳೀಯ ಸಾಂಸ್ಕೃತಿಕ ಕೇಂದ್ರಗಳ ಮೂಲಕ ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸಬೇಕೆಂದು ಕರೆಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.