ಮಾಸ್ಕೊ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ಘೋಷಿಸಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಅವರು ಕರೆ ನೀಡಿದ್ದಾರೆ.

‘ನಾನು ಉಕ್ರೇನ್ ಮೇಲೆಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ’ ಎಂದು ಅವರು ದೂರದರ್ಶನದ ಮೂಲಕ ಘೊಷಣೆ ಮಾಡಿದ್ದಾರೆ. ಇದೇವೇಳೆ, ಕಾರ್ಯಾಚರಣೆಯ ಮಧ್ಯ ಪ್ರವೇಶಿಸುವವರ ವಿರುದ್ಧ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ.

ಪೂರ್ವ ಉಕ್ರೇನ್‌ನಲ್ಲಿನ ಬಂಡಾಯ ನಾಯಕರು ಉಕ್ರೇನ್ ವಿರುದ್ಧ ಮಿಲಿಟರಿ ಸಹಾಯಕ್ಕಾಗಿ ರಷ್ಯಾದ ನೆರವು ಕೇಳಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಹೇಳಿಕೆ ಬೆನ್ನಲ್ಲೇ ಪುಟಿನ್ ಈ ಆದೇಶ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯನ್ನರನ್ನು ಉದ್ದೇಶಿಸಿ ‘ಯುರೋಪ್‌ನಲ್ಲಿನ ಪ್ರಮುಖ ಯುದ್ಧ’ ವನ್ನು ಬೆಂಬಲಿಸದಂತೆ ತಡರಾತ್ರಿ ಭಾವನಾತ್ಮಕ ಮನವಿ ಮಾಡಿದ್ದರು.

ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಾ, ಉಕ್ರೇನ್ ಬಗ್ಗೆ ರಷ್ಯಾದ ಜನರಿಗೆ ಸುಳ್ಳು ಹೇಳಲಾಗುತ್ತಿದೆ ಮತ್ತು ಯುದ್ಧದ ಸಾಧ್ಯತೆಯು ‘ನಿಮ್ಮ ಮೇಲೆ ಅವಲಂಬಿತವಾಗಿದೆ‘ ಎಂದು ಝೆಲೆನ್ಸ್ಕಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.