ಮಾಸ್ಕೊ(ರಷ್ಯಾ): ವಿಷಪ್ರಾಶನಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರ ಕೂದಲು ಮತ್ತು ಕೈಗಳಲ್ಲಿ ಕೈಗಾರಿಕೆಗಳಲ್ಲಿ ಬಳಸಲಾಗುವ ರಾಸಾಯನಿಕ ವಸ್ತು ಪತ್ತೆಯಾಗಿದೆ ನವಲ್ನಿ ಚಿಕಿತ್ಸೆ ಪಡೆಯುತ್ತಿರುವ ಸೈಬಿರಿಯಾ ಪ್ರಾಂತ್ಯದ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ನವಲ್ನಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ದೌಡಾಯಿಸುತ್ತಿರುವ ಅಲೆಕ್ಸಿ ಪತ್ನಿ ಯೂಲಿಯಾ ನವಲ್ನಾಯಾ

ಪೊಲೀಸ್ ಪ್ರಯೋಗಾಲಯದ ವರದಿಯಲ್ಲಿ ಈ ವಿಚಾರ ಉಲ್ಲೇಖವಾಗಿರುವುದಾಗಿ ಸಚಿವಾಲಯ ತಿಳಿಸಿದೆ.

ನವಲ್ನಿ ಅವರಿಗೆ ಚಿಕಿತ್ಸೆ ನೀಡುತ್ತಿರುವ, ಒಮ್ಸ್ಕ್ ನಗರದ ಆಸ್ಪತ್ರೆಯ ವೈದ್ಯ ಅಲೆಕ್ಸಾಂಡರ್ ಮುರಾವ್‌ಸ್ಕೊವ್ಕಿ ಶುಕ್ರವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, 44 ವರ್ಷದ ಅಲೆಕ್ಸಿ ಅವರ ಬಟ್ಟೆ ಮತ್ತು ಬೆರಳುಗಳಲ್ಲಿ ಕೈಗಾರಿಕಾ ರಾಸಾಯನಿಕ ಪದಾರ್ಥಗಳ ಕುರುಹುಗಳು ಕಂಡುಬಂದಿವೆ ಎಂದು ಹೇಳಿದ್ದರು. ಇದಾದ ನಂತರ ಆರೋಗ್ಯ ಸಚಿವಾಲಯವೂ ಇದೇ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಟು ಟೀಕಾಕಾರರಾಗಿರುವ ನವಲ್ನಿ ಗುರುವಾರ ಬೆಳಿಗ್ಗೆ ಚಹಾ ಕುಡಿದ ನಂತರ ಗಂಭೀರ ಸ್ಥಿತಿಗೆ ಜಾರಿದರು. ಅವರಿಗೆ ಯಾರೋ ವಿಷಪ್ರಾಶನ ಮಾಡಿಬಹುದು ಎಂದು ಅವರ ಮಿತ್ರರು ಶಂಕಿಸಿದ್ದಾರೆ.

ಕಳೆದ ವರ್ಷವೂ ನವಲ್ನಿ ಅವರು ತೀವ್ರ ಅಲರ್ಜಿಯಿಂದ ಬಳಲಿದ್ದರು. ವಿಷ ಪ್ರಯೋಗದಿಂದ ಈ ರೀತಿ ಆಗಿರುವ ಸಂಭವವಿದೆ ಎಂದು ವೈದ್ಯರು ತಿಳಿಸಿದ್ದರು ಎಂದು ಅವರ ಅಧಿಕೃತ ವಕ್ತಾರೆ ಗುರುವಾರ ತಿಳಿಸಿದ್ದರು.

ವಕೀಲ ಮತ್ತು ಭ್ರಷ್ಟಾಚಾರ ವಿರೋಧಿ ಆಂದೋಲನದ ಚಳವಳಿಗಾರ ನವಲ್ನಿ ಸರ್ಕಾರದ ವಿರುದ್ಧ ಧ್ವನಿಎತ್ತಿ ಹಲವು ಬಾರಿ ಜೈಲುವಾಸ ಅನುಭಸಿದ್ದಾರೆ. ಸರ್ಕಾರದ ಪರ ಕಾರ್ಯಕರ್ತರಿಂದ ಥಳಿತ್ತಕ್ಕೂ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.