ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಐವರ ಸಾವು

Published 3 ಜುಲೈ 2024, 14:35 IST
Last Updated 3 ಜುಲೈ 2024, 14:35 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನ ಉತ್ತರದಲ್ಲಿರುವ ದನಿಪ್ರೊ ನಗರದ ಮೇಲೆ ರಷ್ಯಾವು ಗುರುವಾರ ನಡೆಸಿದ ಕ್ಷಿಪಣಿ ಮತ್ತು ಡ್ರೋನ್‌ ದಾಳಿಯಲ್ಲಿ ಐವರು ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ.

ಶಾಪಿಂಗ್‌ ಮಾಲ್‌ ಮತ್ತು ರಸ್ತೆಗಳಲ್ಲಿ ಸ್ಫೋಟದ ಅವಶೇಷಗಳು ಬಿದ್ದಿರುವ ಚಿತ್ರಗಳನ್ನು ಸ್ಥಳೀಯ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ ಎಂದು ಮೇಯರ್ ಬೋರಿಸ್ ಫಿಲಾಟೋವ್‌ ತಿಳಿಸಿದ್ದಾರೆ.

ಆಸ್ಪತ್ರೆಯೊಂದರ ಮಕ್ಕಳ ತೀವ್ರ ನಿಗಾ ಘಟಕಕ್ಕೆ ಅವಶೇಷಗಳು ಅಪ್ಪಳಿಸಿವೆ. ಮತ್ತೊಂದು ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಉಕ್ರೇನ್‌ನ ನಾಲ್ಕನೇ ಅತಿ ದೊಡ್ಡ ನಗರದ ಕಟ್ಟಡಗಳ ಮೇಲೆ ಕ್ಷಿಪಣಿಗಳು ದಾಳಿ ಮಾಡಿರುವ ಮತ್ತು ಅದರ ಅವಶೇಷಗಳು ಗಾಳಿಯಲ್ಲಿ ಹಾರುತ್ತಿರುವ ವಿಡಿಯೊವನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್‌ಕಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಲ್ಲಿ ಈವರೆಗೆ 10 ಸಾವಿರ ನಾಗರಿಕರು ಮೃತಪಟ್ಟಿದ್ದು, 20 ಸಾವಿರ ಜನ ಗಾಯಗೊಂಡಿದ್ದಾರೆ’ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಉಕ್ರೇನ್‌ಗೆ ಐಎಮ್‌ಎಫ್ ನೆರವು:

ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಮ್‌ಎಫ್) ಉಕ್ರೇನ್‌ಗೆ 18,394 ಕೋಟಿ ನೆರವು ದೊರಕಿದೆ ಎಂದು ಪ್ರಧಾನಿ ಡೆನ್ನಿಸ್‌ ಶ್ಮಿಹಾಲ್ ಅವರು ಬುಧವಾರ ತಿಳಿಸಿದ್ದಾರೆ. 

ಈ ಹಣವನ್ನು ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತು ವೈದ್ಯರು, ಶಿಕ್ಷಕರ ವೇತನಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT