ವಾಷಿಂಗ್ಟನ್: ಬಿಜೆಪಿಯು ಪ್ರಚಾರ ಮಾಡುತ್ತಿರುವಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಪಪ್ಪು’ ಅಲ್ಲ, ಅವರು ‘ಉನ್ನತ ಶಿಕ್ಷಣ ಪಡೆದಿರುವ, ಸಾಕಷ್ಟು ತಿಳಿದುಕೊಂಡಿರುವ ಕಾರ್ಯತಂತ್ರ ನಿಪುಣ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೊಡಾ ಹೇಳಿದರು.

ಸಾಗರೋತ್ತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಿತ್ರೊಡಾ ಅವರು ಅಮೆರಿಕದ ಡಲ್ಲಾಸ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಡುವಾಗ ಅವರು ಈ ರೀತಿ ಹೇಳಿದರು.

‘ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡಿ ಬಿಜೆಪಿ ಪ್ರಚಾರ ಮಾಡುತ್ತಿರುವುದಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ರಾಹುಲ್ ಹೊಂದಿದ್ದಾರೆ. ಇವರು ಪಪ್ಪು ಅಲ್ಲ. ಯಾವುದೇ ವಿಷಯದಲ್ಲಿಯೂ ಇವರು ಆಳವಾದ ಜ್ಞಾನ ಹೊಂದಿದ್ದಾರೆ ಎಂದು ಹೇಳಬಲ್ಲೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.