ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಲಿಸ್ತಾನಿ ಹೋರಾಟಗಾರರ ವಿಮಾನ ಯಾನ ನಿರ್ಬಂಧ: ಆದೇಶ ಎತ್ತಿಹಿಡಿದ ಕೆನಡಾ ಕೋರ್ಟ್

Published 21 ಜೂನ್ 2024, 16:11 IST
Last Updated 21 ಜೂನ್ 2024, 16:11 IST
ಅಕ್ಷರ ಗಾತ್ರ

ಒಟ್ಟಾವಾ: ಇಬ್ಬರು ಖಾಲಿಸ್ತಾನಿ ಮೂಲಭೂತವಾದಿಗಳ ವಿಮಾನಯಾನಕ್ಕೆ ಹೇರಿದ್ದ ನಿರ್ಬಂಧ ಸಡಿಲಿಸಲು ಕೆನಡಾದ ಕೋರ್ಟ್‌ ನಿರಾಕರಿಸಿದೆ.

ಭಗತ್‌ ಸಿಂಗ್ ಬ್ರಾರ್ ಮತ್ತು ಪರ್ವ್‌ಕರ್ ಸಿಂಗ್ ದುಲೈ ಅವರು ಸಲ್ಲಿಸಿದ್ದ ಮನವಿಯನ್ನು ಕೆನಡಾದ ಫೆಡರಲ್‌ ಕೋರ್ಟ್ ಕಳೆದ ವಾರ ವಜಾ ಮಾಡಿದೆ.

ಈ ಇಬ್ಬರಿಗೂ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರೆ, ಭಯೋತ್ಪಾದನೆ ಆದೀತೆಂಬ ಆತಂಕಕ್ಕೆ ಸಕಾರಣವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

ಕೆನಡಾದ ವಿಮಾನಯಾನ ಭದ್ರತಾ ಕಾಯ್ದೆಯಡಿ ಇವರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು ಎಂದು ಕೆನಡಾದ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

ಈ ಇಬ್ಬರೂ ವ್ಯಾಂಕೋವರ್‌ನಿಂದ ಪ್ರಯಾಣಿಸಲು 2018ರಲ್ಲಿ ಅನುಮತಿ ನಿರಾಕರಿಸಲಾಗಿತ್ತು. 2019ರಲ್ಲಿ ಈ ಇಬ್ಬರೂ ಫೆಡರಲ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಇವರ ವಿರುದ್ಧವಾಗಿ ನ್ಯಾಯಮೂರ್ತಿ ಸೈಮನ್‌ ನೋಯೆಲ್ 2022ರಲ್ಲಿ ಆದೇಶ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT