ಚಿತ್ವಾನ್: ಕಳ್ಳಸಾಗಣೆದಾರರ ದುಷ್ಕೃತ್ಯಕ್ಕೆ ನೇಪಾಳದ ಚಿತ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ಎರಡು ಘೇಂಡಾಮೃಗಗಳು ಬಲಿಯಾಗಿವೆ.

ಚಿತ್ವಾನ್ ಜಿಲ್ಲೆಯಲ್ಲಿರುವ ನಾರಾಯಣಿ ನದಿ ದಂಡೆಯಲ್ಲಿ ಶುಕ್ರವಾರ ರಾತ್ರಿ ಕಳ್ಳಸಾಗಣೆದಾರರು 14 ವರ್ಷದ ಒಂದು ಹೆಣ್ಣು ಘೇಂಡಾಮೃಗ ಹಾಗೂ ಅದರ 4 ವರ್ಷದ ಗಂಡು ಮರಿ ಘೇಂಡಾಮೃಗವನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಚಿತ್ವಾನ್ ನ್ಯಾಷನಲ್ ಪಾರ್ಕ್‌ನ ಮಾಹಿತಿ ಅಧಿಕಾರಿ ಗಣೇಶ್ ತಿವಾರಿ ತಿಳಿಸಿದ್ದಾರೆ.

ನದಿ ದಡದಲ್ಲಿ ಸತ್ತು ಬಿದ್ದಿದ್ದ ಘೇಂಡಾಮೃಗಗಳ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸತ್ತಿದ್ದ ಘೇಂಡಾಮೃಗಗಳ ಕೊಂಬುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಂತಕರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

2022 ರಿಂದ ಇಲ್ಲಿಯವರೆಗೆ ಚಿತ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ವಿವಿಧ ಕಾರಣಗಳಿಂದ ಒಟ್ಟು 10 ಘೇಂಡಾಮೃಗಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಘೇಂಡಾಮೃಗಗಳ ಕೊಂಬುಗಳು ಕಾಮೋತ್ತೇಜಕ ಎಂದು ನಂಬಿ ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಅವುಗಳಿಗೆ ಬೇಡಿಕೆ ಇದೆ. ಈ ಕಾರಣಕ್ಕಾಗಿ ಅವುಗಳ ಹತ್ಯೆ ನಡೆಯುತ್ತಿದೆ.

ನಟ ದರ್ಶನ್ ತೋಟದ ಮನೆಯಿಂದ 4 ವನ್ಯ ಪಕ್ಷಿ ವಶ: ಪ್ರಕರಣ ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.