ಟೋಕಿಯೊ: ಜಪಾನ್‌ನ ಪ್ರವಾಸದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಭಾನುವಾರ ಟೋಕಿಯೊಗೆ ಬುಲೆಟ್ ರೈಲಿನಲ್ಲಿ 500 ಕಿಲೋಮೀಟರ್‌ಗಳ ಪ್ರಯಾಣ ಕೈಗೊಂಡರು. ಬುಲೆಟ್ ರೈಲಿನಂಥ ಸೇವೆಯು ಭಾರತೀಯ ನಾಗರಿಕರಿಗೆ ಪ್ರಯೋಜಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಒಸಾಕಾದಿಂದ ಟೋಕಿಯೊಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಸುಮಾರು 500 ಕಿ.ಮೀ ದೂರವನ್ನು ಎರಡೂವರೆ ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಬಹುದು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪ್ರಯಾಣದ ಚಿತ್ರವನ್ನು ತಮ್ಮ ಟ್ವೀಟ್‌ನಲ್ಲಿ ಅವರು ಸೇರಿಸಿದ್ದಾರೆ.

"ಬುಲೆಟ್ ರೈಲಿಗೆ ಸಮಾನವಾದ ರೈಲ್ವೆ ಸೇವೆ ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲ, ವೇಗ ಮತ್ತು ಗುಣಮಟ್ಟದಲ್ಲೂ ನಮ್ಮ ದೇಶದಲ್ಲಿ ಬಳಕೆಗೆ ಬರಬೇಕು. ಬಡ ಮತ್ತು ಮಧ್ಯಮ ವರ್ಗದ ಜನರು ಪ್ರಯೋಜನ ಪಡೆಯಬೇಕು. ಅವರ ಪ್ರಯಾಣ ಸುಲಭವಾಗಬೇಕು’ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದರ ಜತೆಗೆ #FutureIndia(ಭವಿಷ್ಯದ ಭಾರತ) ಎಂಬ ಹ್ಯಾಷ್ ಟ್ಯಾಗ್ ಅನ್ನೂ ಅವರು ಬಳಸಿದ್ದಾರೆ.

ತಮಿಳುನಾಡಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಸಿಎಂ ಈ ಹಿಂದೆ ಸಿಂಗಾಪುರ ಮತ್ತು ಜಪಾನ್‌ನ ಎರಡು ರಾಷ್ಟ್ರಗಳ ಅಧಿಕೃತ ಪ್ರವಾಸವನ್ನು ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.