ಇಸ್ಲಾಮಾಬಾದ್: ಅಫ್ಗಾನಿಸ್ತಾನದ ರಾಷ್ಟ್ರೀಯ ಉದ್ಯಾನ ಬಾಂದ್–ಇ–ಅಮೀರ್‌ಗೆ ಮಹಿಳೆಯರು ಭೇಟಿ ನೀಡುವುದನ್ನು ತಡೆಯಲು ತಾಲಿಬಾನ್ ಸರ್ಕಾರವು ಭದ್ರತಾ ಪಡೆಗಳನ್ನು ಬಳಸಲಿದೆ ಎಂದು ಗೊತ್ತಾಗಿದೆ.

ಕೇಂದ್ರ ಬಮಿಯಾನ್ ಪ್ರಾಂತ್ಯದ ಬಾಂದ್-ಎ-ಅಮೀರ್ ರಾಷ್ಟ್ರೀಯ ಉದ್ಯಾನಕ್ಕೆ ಬರುವ ಮಹಿಳೆಯರು ಹಿಜಾಬ್ ಅಥವಾ ಇಸ್ಲಾಮಿಕ್ ಶಿರವಸ್ತ್ರವನ್ನು ಸರಿಯಾಗಿ ಧರಿಸುತ್ತಿಲ್ಲ ಎಂದು ಸರ್ಕಾರ ಆರೋಪಿಸಿದೆ.

ಇತ್ತೀಚೆಗೆ ಬಮಿಯಾನ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ, ‘ಮಹಿಳೆಯರು ಹಿಜಾಬ್ ಅನ್ನು ಸೂಕ್ತ ರೀತಿಯಲ್ಲಿ ಧರಿಸುತ್ತಿಲ್ಲ’ ಎಂದು ಅಧಿಕಾರಿಗಳು ಮತ್ತು ಧಾರ್ಮಿಕ ಮೌಲ್ವಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಉದ್ಯಾನಕ್ಕೆ ಮಹಿಳೆಯರು ಭೇಟಿ ನೀಡುವುದನ್ನು ತಡೆಯಲು ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ ಎನ್ನಲಾಗಿದೆ.

‘ಮಹಿಳೆಯರಿಗೆ ಪ್ರವಾಸಕ್ಕೆ ಹೋಗುವುದು ಅನಿವಾರ್ಯವೇನಲ್ಲ’ ಎಂದು ಸಚಿವ ಹನಾಫಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.