ಪ್ಯಾರಿಸ್: ಅಮೆರಿಕ ಹಾಗೂ ಯುರೋಪ್‌ನಲ್ಲಿರುವ ಜಾಗತಿಕ ಮಟ್ಟದ ಬೃಹತ್ ಚಿಲ್ಲರೆ ವ್ಯಾಪಾರಿಗಳು ಭಾರತದ ಆಟಿಕೆ ತಯಾರಕರಿಂದ ಸರಕುಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಅವಕಾಶವನ್ನು ದೇಶದ ಆಟಿಕೆ ತಯಾರಕರು ಕಳೆದುಕೊಳ್ಳಬಾರದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಿದೇಶದ ಬೃಹತ್ ಚಿಲ್ಲರೆ ವ್ಯಾಪಾರಿಗಳು ಉತ್ತಮ ಪ್ರಮಾಣದಲ್ಲಿ ಭಾರತದ ಆಟಿಕೆಗಳನ್ನು ಖರೀದಿಸಲು ಮುಂದೆಬರುತ್ತಿದ್ದಾರೆ‘ ಎಂದು ಅವರು ಸೂಚಿಸಿದರು.

‘ದೇಶಿಯವಾಗಿ ಆಟಿಕೆ ತಯಾರಿಕೆಯ ಉತ್ತೇಜನಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಕೈಗೊಂಡಿದೆ. ಒಪ್ಪಂದದ ಮೂಲಕ ಜಾಗತಿಕ ಮಟ್ಟದ ಆಟಗಾರರ ಅವಶ್ಯಕತೆಯನ್ನು ದೇಶಿಯ ಆಟಿಕೆ ತಯಾರಕರು ತಲುಪಲು ಡಿಪಿಐಐಟಿ ಸಹಾಯ ಮಾಡುತ್ತದೆ‘ ಎಂದು ಅಧಿಕಾರಿಗಳು ಹೇಳಿದರು.

‘ಅಮೆರಿಕ ಮೂಲದ ಚಿಲ್ಲರೆ ವ್ಯಾಪಾರಿಯೊಬ್ಬರು ಮೂರು ವಿಭಾಗಗಳಲ್ಲಿ ಆಟಿಕೆಗಳನ್ನು ಖರೀದಿಸಲು ಸಂಪರ್ಕಿಸಿದ್ದಾರೆ. ಇದರಲ್ಲಿ ಸವಾರಿ, ಹೊರಾಂಗಣ ಆಟಿಕೆಗಳು, ಯಾಂತ್ರಿಕ ಆಟಿಕೆಗಳು ಸೇರಿದ್ದು ಒಟ್ಟು ₹ 28 ಕೋಟಿ ಮೌಲ್ಯದ್ದಾಗಿದೆ‘ ಎಂದು ಪ್ಲೇಗ್ರೊ ಟಾಯಿಸ್‌ನ ಮಾಲೀಕ ಹಾಗೂ ಭಾರತದ ಆಟಿಕೆ ಅಸೋಸಿಯೇಷನ್ ಅಧ್ಯಕ್ಷ ಮನು ಗುಪ್ತಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕಂಪನಿಗೆ ವಿದೇಶಿ ಆಟಗಾರರನ್ನು ಸಂಪರ್ಕಿಸಲು ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಇಲಾಖೆ ಸಹಕಾರ ಕೊಟ್ಟಿದೆ‘ ಎಂದೂ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.