ಪೇಶಾವರ್: ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಉದ್ರಿಕ್ತರು ವ್ಯಕ್ತಿಯೊಬ್ಬನನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಖೈಬರ್ ಪಂಖ್ತುವಾ ಪ್ರಾಂತ್ಯದ ಸ್ವಾಟ್ ಜಿಲ್ಲೆಯಲ್ಲಿ ಬುಧವಾರ ಈ ದುರ್ಘಟನೆ ನಡೆದಿದೆ. ಮೃತನನ್ನು ಪಂಜಾಬ್ ಪ್ರಾಂತ್ಯದ ಯುವಕ ಮೊಹಮ್ಮದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಇಸ್ಮಾಯಿಲ್ ಕಣಿವೆ ನಗರಿ ಸ್ವಾಟ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರು ಕುರಾನ್ ಗ್ರಂಥವನ್ನು ಸುಟ್ಟು ಅದರ ವಿಡಿಯೊವನ್ನು ಮೊಬೈಲ್ಗಳಲ್ಲಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ವಿಷಯ ತಿಳಿದು ಸ್ವಾಟ್ ಪೊಲೀಸರು ಮೊಹಮ್ಮದ್ನನ್ನು ಬಂಧಿಸಿ ಸಾಯಿಲ್ಕೋಟ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದರು.

ಈ ವೇಳೆ ಮೊಹಮ್ಮದ್ ಕೃತ್ಯ ತಿಳಿದು ಉದ್ರಿಕ್ತರಾದ ಸ್ಥಳೀಯ ಜನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆತನನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ದಾಂಧಲೆ ನಡೆಸಿದ್ದರು. ವಿರೋಧ ವ್ಯಕ್ತಪಡಿಸಿದ ಪೊಲೀಸ್ ಮೇಲೆ ಹಲ್ಲೆ ನಡೆಸಿ ಠಾಣೆಗೆ ಬೆಂಕಿ ಇಟ್ಟಿದ್ದರು. ಬಳಿಕ ಮೊಹಮ್ಮದ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ ಠಾಣೆಯ ಮುಂದೆಯೇ ಆತನ ಶವಕ್ಕೆ ಬೆಂಕಿ ಇಟ್ಟು ಅಲ್ಲಾಹು ಅಕ್ಬರ್ ಎಂದು ಕೂಗಾಡಿದ್ದಾರೆ ಎಂದು ಸ್ವಾಟ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಜೈದ್ ಉಲ್ಲಾ ಹೇಳಿಕೆ ಆಧರಿಸಿ ದಿ ಎಕ್ಸ್ಪ್ರೆಸ್ ಟ್ರಿಬುನ್ ವರದಿ ಮಾಡಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರನ್ನು ಬೆಚ್ಚಿಬೀಳಿಸಿವೆ.

ಈ ದುರ್ಘಟನೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದು ಇನ್ನೂ ಹಿಡಿತಕ್ಕೆ ಬಂದಿಲ್ಲ ಎಂದು ಜೈದ್ ಉಲ್ಲಾ ತಿಳಿಸಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಖೈಬರ್ ಪಂಖ್ತುವಾ ಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮಿನ್ ಗಂದಾಪುರ್ ಅವರು, ಸ್ಥಳಕ್ಕೆ ಕೂಡಲೇ ಹೆಚ್ಚಿನ ಪೊಲೀಸ್ ಕಳುಹಿಸಿ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
.YOGA DAY 2024: ಯೋಗ ದಿನದ ಸಂಭ್ರಮದಲ್ಲಿ ಸೆಲಿಬ್ರಿಟಿಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.