ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡೆನ್ ಈ ಹಿಂದೆ ಉಪಾಧ್ಯಕ್ಷರಾಗಿದ್ದಾಗ ಚೀನಾಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಲು ಒತ್ತುನೀಡಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಇದಕ್ಕೆ ಜೋ ಬೈಡೆನ್ ಅವರು, ‘ಅಮೆರಿಕದ ಇತಿಹಾಸದಲ್ಲಿಯೇ ಅಧಿಕಾರದಿಂದ ನಿರ್ಗಮಿಸುವ ಹಂತದಲ್ಲಿ ಕಡಿಮೆ ಉದ್ಯೋಗಾವಕಾಶ ಇರುವಂತೆ ನೋಡಿಕೊಂಡಿರುವ ಮೊದಲ ಅಧ್ಯಕ್ಷ ಟ್ರಂಪ್’ ಎಂದು ತಿರುಗೇಟು ನೀಡಿದ್ದಾರೆ.

ಕೋವಿಡ್-19ಕ್ಕೆ ಚಿಕಿತ್ಸೆ ಪಡೆದ ಬಳಿಕ ಶ್ವೇತಭವನದಿಂದ ಮೊದಲ ಸಾರ್ವಜನಿಕ ಭಾಷಣ ಮಾಡಿದ ಟ್ರಂಪ್ ಅವರು, ಬೈಡೆನ್ ವಿರುದ್ಧ ಹರಿಹಾಯ್ದರು.

ಡೆಮಾಕ್ರಟಿಕ್ ಪಕ್ಷವು ತನ್ನದೇ ಸಮಾಜವಾದದ ಕಾರ್ಯಕ್ರಮ ಹೊಂದಿದ್ದು, ವೇದಿಕೆ ಒದಗಿಸುತ್ತಿದೆ. ನಿಜವಾಗಿ ಸಮಾಜವಾದಕ್ಕಿಂತಲೂ ಹೆಚ್ಚಿನದು ಎಂದು ಟೀಕಿಸಿದರು. ಆಗ ಸಭಿಕರ ಗುಂಪಿನಿಂದ ‘ಕಮ್ಯುನಿಸ್ಟ್’ ಎಂಬ ಕೂಗು ಕೇಳಿಬಂತು. ‘ಕಮ್ಯುನಿಸ್ಟ್ ಅವರ ಬಗ್ಗೆ ಸರಿ’ ಎಂದು ಪ್ರತಿಕ್ರಿಯಿಸಿದರು.

ಇನ್ನೊಂದೆಡೆ, ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ಕೈಗೊಂಡಿರುವ ಬೈಡೆನ್ ಅವರು, ಟ್ರಂಪ್ ಅವರು ಕೇವಲ ಸಿರಿವಂತರ ಹಿತಾಸಕ್ತಿಯನ್ನಷ್ಟೇ ರಕ್ಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೋವಿಡ್ ಕಾರಣದಿಂದಾಗಿ ವಿಧಿಸಲಾಗಿರುವ ನಿರ್ಬಂಧದ ಕಾರಣ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಪ್ರಚಾರದಲ್ಲಿ ಹೆಚ್ಚಿನ ಜನರು ಸೇರಲು ಅವಕಾಶವಿರಲಿಲ್ಲ. ಹಾಜರಿದ್ದವರು ಪರಸ್ಪರ ಅಂತರ ಕಾಯ್ದುಕೊಂಡಿದ್ದರು.

ಇನ್ನೊಂದೆಡೆ, ಟ್ರಂಪ್ ಅವರು ಶ್ವೇತಭವನದಿಂದ ಮಾಡಿದ ಭಾಷಣದ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ‘ವಿ ಲವ್ ಯೂ’, ‘ಫೋರ್ ಮೋರ್ ಇಯರ್ಸ್’ ಘೋಷಣೆಗಳು ಆಗಿಂದಾಗ್ಗೆ ಕೇಳಿಬರುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.