ವಾಷಿಂಗ್ಟನ್: ನವೆಂಬರ್ 5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಡೆದಿರುವ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರಿಗಿಂತ ಅಲ್ಪ ಮುನ್ನಡೆ ಪಡೆದಿದ್ದಾರೆ.

ವಾಲ್ಸ್ಟ್ರೀಟ್ ಜರ್ನಲ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಟ್ರಂಪ್ ಅವರು ಹ್ಯಾರಿಸ್ಗಿಂತಲೂ ಶೇಕಡ 2 ಪಾಯಿಂಟ್ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟ್ರಂಪ್ ಪರ ಶೇಕಡ 47ರಷ್ಟು ಮತದಾರರ ಒಲವು ಕಂಡುಬಂದರೆ, ಕಮಲಾ ಪರ ಶೇಕಡ 45ರಷ್ಟು ಒಲವು ಕಂಡುಬಂದಿದೆ.

ಅಂತೆಯೇ, ಸಿಎನ್ಬಿಸಿ ಆಲ್ ಅಮೆರಿಕ ಸಮೀಕ್ಷೆಯ ಪ್ರಕಾರ, ಟ್ರಂಪ್ ಶೇಕಡ 48 ಅಂಶಗಳಷ್ಟು ಮುಂದಿದ್ದರೆ, ಕಮಲಾ ಹ್ಯಾರಿಸ್ ಶೇಕಡ 46ರಷ್ಟು ಅಂಶಗಳಷ್ಟು ಮುನ್ನಡೆ ಸಾಧಿಸಿದ್ದಾರೆ. ಆಗಸ್ಟ್ನಿಂದ ಈ ಟ್ರೆಂಡ್ ಬದಲಾಗಿಲ್ಲ ಎಂದು ಅದು ತಿಳಿಸಿದೆ. ಏಳು ಪ್ರಮುಖ ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಆದರೆ, ಎಲ್ಲ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮೀಕ್ಷೆಗಳನ್ನು ಟ್ರ್ಯಾಕ್ ಮಾಡುವ RealClearPolitics ಪ್ರಕಾರ, ಹ್ಯಾರಿಸ್ ರಾಷ್ಟ್ರೀಯ ಮಟ್ಟದಲ್ಲಿ ಟ್ರಂಪ್ಗಿಂತ ಶೇಕಡ 0.3 ಅಂಶಗಳ ಮುನ್ನಡೆಯನ್ನು ಹೊಂದಿದ್ದಾರೆ ಎಂದು ಹೇಳಿದೆ.

ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಪ್ರಮುಖ ರಾಜ್ಯಗಳಾದ ಅರಿಜೋನಾ, ನೆವಾಡ, ವಿಸ್ಕಸಿನ್, ಮಿಚಿಗನ್, ಪನ್ಸಿಲ್ವೆನಿಯಾ, ನಾರ್ತ್ ಕರೋಲಿನಾ, ಜಾರ್ಜಿಯಾದಲ್ಲಿ ಟ್ರಂಪ್, ಕಮಲಾ ಹ್ಯಾರಿಸ್ಗಿಂತಲೂ ಶೇಕಡ 0.9 ಅಂಶಗಳಷ್ಟು ಮುಂದಿದ್ದಾರೆ.

ಕಾನೂನುಬದ್ಧ ಬೆಟ್ಟಿಂಗ್, ಚುನಾವಣಾ ಅಂಕಿ ಅಂಶಗಳನ್ನು ಆಧರಿಸಿ ಅಂದಾಜು ಮಾಡುವ ಅಮೆರಿಕದ ಹಣಕಾಸು ವಿನಿಮಯ ಮತ್ತು ಭವಿಷ್ಯ ಮಾರುಕಟ್ಟೆ ಕಲ್ಶಿ ಪ್ರಕಾರ, ಹ್ಯಾರಿಸ್ಗಿಂತ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಇದರ ಪ್ರಕಾರ, ಟ್ರಂಪ್ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಶೇಕಡ 61 ರಷ್ಟಿದ್ದರೆ, ಹ್ಯಾರಿಸ್ ಗೆಲ್ಲುವ ಸಾಧ್ಯತೆ ಶೇಕಡ 39ರಷ್ಟಿದೆ. ವಾಲ್ ಸ್ಟ್ರೀಟ್ ಜರ್ನಲ್ ಹೇಳುವಂತೆ ಹ್ಯಾರಿಸ್ ಅವರ ಅಭಿಪ್ರಾಯಗಳು ಆಗಸ್ಟ್ನಿಂದ ಹೆಚ್ಚು ಋಣಾತ್ಮಕವಾಗಿವೆ. ಪರ ಇದ್ದಷ್ಟೇ, ವಿರೋಧಿ ಮತದಾರರೂ ಸೃಷ್ಟಿಯಾಗಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಟ್ರಂಪ್ ಅವರ ಬಗೆಗಿನ ಅಭಿಪ್ರಾಯಗಳು ಉತ್ತಮವಾಗಿವೆ. ಮತದಾರರು ಈ ಚುನಾವಣಾ ಸಂದರ್ಭಕ್ಕಿಂತ ಹೆಚ್ಚು ಅಧ್ಯಕ್ಷರಾಗಿದ್ದ ಸಮಯದಲ್ಲಿ ಅವರ ಕೆಲಸವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಶೇಕಡ 52ರಷ್ಟು ಜನ ಅವರ ಕಾರ್ಯವೈಖರಿ ಒಪ್ಪಿಕೊಂಡಿದ್ದರೆ, ಶೇಕಡ 48ರಷ್ಟು ಜನರು ತಿರಸ್ಕರಿಸಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ.
.ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ಅನರ್ಹ: ಕಮಲಾ ಹ್ಯಾರಿಸ್ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.