ಲಂಡನ್: ಮಸಾಜ್ಗೆ ಸಂಬಂಧಿಸಿದಂತೆ ಭಾರತದಲ್ಲಿ ಎರಡು ವರ್ಷ ತರಬೇತಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದ ಬ್ರಿಟನ್ನ ವೈದ್ಯರೊಬ್ಬರಿಗೆ, ಸ್ಥಳೀಯ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 18 ತಿಂಗಳ ಸಜೆ ವಿಧಿಸಿದೆ.

ಮಹಿಳಾ ರೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ ಅವರ ಹೆಸರನ್ನು ಲೈಂಗಿಕ ಅಪರಾಧಿಗಳ ನೋಂದಣಿ ಪಟ್ಟಿಗೆ 10 ವರ್ಷಗಳ ಅವಧಿಗೆ ಸೇರಿಸಿದೆ. ಈಸ್ಟ್ಬೌರ್ನ್ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ, 34 ವರ್ಷದ ವೈದ್ಯ ಸೈಮನ್ ಅಬ್ರಹಾಂ ಶಿಕ್ಷೆಗೆ ಒಳಗಾದವರು.

ತೀವ್ರ ತಲೆಬೇನೆ ಎಂದು ಬಂದಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ನಾಲ್ಕು ದಿನದ ವಿಚಾರಣೆಯ ಬಳಿಕ ಆರೋಪ ಸಾಬೀತಾಗಿದ್ದು, ಚಿಚೆಸ್ಟರ್ ಕ್ರೌನ್ ನ್ಯಾಯಾಲಯವು ಸಜೆ ವಿಧಿಸಿ ಆದೇಶಿಸಿತು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.