ಬಾಕು (ಪಿಟಿಐ): ‘ಜಾಗತಿಕ ಹವಾಮಾನ ಪರಿಣಾಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲು ರಾಜಕೀಯ ನಿರ್ಧಾರವನ್ನು ತ್ವರಿತವಾಗಿ ಪ್ರಕಟಿಸಬೇಕು’ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟಿಯಲ್ ಅವರು ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದರು.

ತಾಪಮಾನ ಬದಲಾವಣೆ ಕುರಿತಂತೆ ಅಜೈರ್ಬೈಜಾನ್ನ ರಾಜಧಾನಿ ಬಾಕುವಿನಲ್ಲಿ ನಡೆದ ‘ಸಿಒಪಿ29’ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಭವಿಷ್ಯದಲ್ಲಿ ಎದುರಾಗುವ ಗಂಭೀರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಅಗತ್ಯವಿದ್ದು, ಸದಸ್ಯ ರಾಷ್ಟ್ರಗಳು ಹೆಚ್ಚಿನ ಒತ್ತುನೀಡಬೇಕು’ ಎಂದರು.

‘ಸಮಸ್ಯೆ ಬಗೆಹರಿಸಲು ಪರಸ್ಪರ ಸಹಕಾರ ಈಗಿನ ತುರ್ತು ಅಗತ್ಯ. ಈ ವಿಚಾರದಲ್ಲಿ ಬೇರೆಯವರು ಮೊದಲು ಕ್ರಮ ಕೈಗೊಳ್ಳಲಿ ಎಂದು ಕಾಯುವುದು ಸರಿಯಲ್ಲ. ಇಂತಹ ನಡವಳಿಕೆಗಳು ಎಲ್ಲರ ಮೇಲೂ ಪರಿಣಾಮ ಬೀರಲಿವೆ’ ಎಂದು ಸ್ಟಿಯಲ್ ಎಚ್ಚರಿಸಿದರು.

‘ಈಗ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾಲ ಬಂದಿದೆ’ ಎಂದು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.

ಬಿಕ್ಕಟ್ಟು ಬಗೆಹರಿಸಲು ಆದ್ಯತೆ: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನೀಡಬೇಕಾದ ಹಣಕಾಸು ನೆರವು, ವ್ಯಾಪಾರ ಸಹಕಾರ ಹಾಗೂ ಹಮಾಮಾನ ಕಾರ್ಯಕ್ರಮದಲ್ಲಿ ಸಮಾನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು ಕೊನೆಗಾಣಿಸಲು ‘ಸಿಒಪಿ29’ ಶೃಂಗಸಭೆಯ ಎರಡನೇ ವಾರದ ಸಭೆಯಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.