ಲಂಡನ್/ಜಿನೀವಾ: ‘ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್ಕೆ) ಪ್ರತಿನಿಧಿಗಳು ಕಳೆದ ವಾರ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದ್ದ ವಿಷಯಗಳು ಅಪ್ರಸ್ತುತ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಗುರುವಾರ ಹೇಳಿದೆ.

‘ಯುಎಸ್ಕೆ ಪ್ರತಿನಿಧಿಗಳು ಸಲ್ಲಿಸಿದ್ದ ಮನವಿಗಳನ್ನು ಸಭೆಯ ನಿರ್ಣಯಗಳಲ್ಲಿ ಸೇರ್ಪಡೆ ಮಾಡಲು ಪರಿಗಣಿಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.

‘ಯುಎಸ್ಕೆ’ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಖಚಿತಪಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್, ‘ಅಂದಿನ ಸಭೆಯಲ್ಲಿ ಪ್ರಚಾರ ಸಾಮಗ್ರಿಗಳನ್ನು ಹಂಚದಂತೆ ಅವರನ್ನು ತಡೆಯಲಾಯಿತು’ ಎಂದಿದ್ದಾರೆ.

ಫೆ.22 ಹಾಗೂ 24ರಂದು ನಡೆದ ಸಭೆಗಳಲ್ಲಿ ‘ಯುಎಸ್ಕೆ’ ಪ್ರತಿನಿಧಿಯೊಬ್ಬರು ‘ಮೂಲನಿವಾಸಿಗಳ ಹಕ್ಕುಗಳು ಹಾಗೂ ಸುಸ್ಥಿರ ಅಭಿವೃದ್ಧಿ’ ಕುರಿತು ಮಾತನಾಡಿದ್ದ ದೃಶ್ಯಗಳನ್ನು ಒಳಗೊಂಡ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಹೀಗಾಗಿ ವಿಶ್ವಸಂಸ್ಥೆ ಈ ಹೇಳಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.