ದುಬೈ: ಇತ್ತೀಚೆಗೆ ಸಿರಿಯಾ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿದ್ದ ಇರಾನ್ ರೆವಲ್ಯೂಷನರಿ ಗಾರ್ಡ್ನ (ಐಆರ್ಜಿ) ವಾಯುಪಡೆಯ ಸಲಹೆಗಾರ ಕರ್ನಲ್ ಅಹ್ಮದ್ರೆಜಾ ಅಫ್ಶಾರಿ ಮೃತಪಟ್ಟಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

‘ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದ ಅಫ್ಶಾರಿ ಸಾವಿಗೀಡಾಗಿದ್ದಾರೆ ಎಂದು ರೆವಲ್ಯೂಷನರಿ ಗಾರ್ಡ್ನ ಕಮಾಂಡರ್ ಹೊಸೇನ್ ಸಲಾಮಿ ತಿಳಿಸಿದ್ದಾರೆ’ ಎಂದು ವರದಿ ಮಾಡಲಾಗಿದೆ. ಆದರೆ ಅಫ್ಶಾರಿ ಸಾವಿನ ನಿಖರ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಡೆದಿದ್ದ ದಾಳಿಯ ವೇಳೆ ಅವರು ಗಾಯಗೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಮೆರಿಕ ಮತ್ತು ಇಸ್ರೇಲ್ ಸೇನೆಯು, ಸಿರಿಯಾದಲ್ಲಿರುವ ಇರಾನ್ ಬೆಂಬಲಿತ ಬಣಗಳ ವಿರುದ್ಧ ಹಲವು ವೈಮಾನಿಕ ದಾಳಿ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.