ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಮ ಪ್ರತಿನಿಧಿಗಳಿಗೆ ರಷ್ಯಾ ನಿರ್ಬಂಧ: ಜಪಾನ್‌ ಪ್ರತಿಭಟನೆ

Published 24 ಜುಲೈ 2024, 12:15 IST
Last Updated 24 ಜುಲೈ 2024, 12:15 IST
ಅಕ್ಷರ ಗಾತ್ರ

ಟೋಕಿಯೊ(ರಾಯಿಟರ್ಸ್‌): ಟೊಯೊಟಾ ಮೋಟಾರ್‌ ಚೇರ್‌ಮೆನ್ ಸೇರಿದಂತೆ ಜಪಾನ್‌ನ ಉದ್ಯಮ ವಲಯದ 13 ಮಂದಿ ಮೇಲೆ ನಿರ್ಬಂಧ ಹೇರಿರುವ ರಷ್ಯಾದ ನಡೆಯನ್ನು ಜಪಾನ್‌ ಖಂಡಿಸಿದೆ. 

ಮಂಗಳವಾರ ಜಪಾನಿನ 13 ಮಂದಿಯ ಹೆಸರನ್ನು ಪ್ರಕಟಿಸಿರುವ ರಷ್ಯಾದ ವಿದೇಶಾಂಗ ಸಚಿವಾಲಯವು, ‘ಅವರು ರಷ್ಯಾವನ್ನು ಪ್ರವೇಶಿಸದಂತೆ ಶಾಶ್ವತವಾಗಿ ನಿರ್ಬಂಧ ಹೇರಲಾಗಿದೆ’ ಎಂದು ತಿಳಿಸಿದೆ.

‘ಈ ನಿರ್ಧಾರದಿಂದ ಜಪಾನ್‌ನ ಉದ್ಯಮ ವಲಯ‌ದ ಚಟುವಟಿಕೆಗಳಿಗೆ ತೊಡಕುಂಟಾಗುತ್ತದೆ. ಇದು ಸ್ವೀಕಾರಾರ್ಹವಲ್ಲ’ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಮಸ ಹಯಾಶಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ರಕುಟೆನ್‌ ಗ್ರೂಪ್‌ ಸಂಸ್ಥಾಪಕ ಹಿರೋಷಿ ಮಿಕಿಟನಿ, ಟೊಯೊಬೊ ಸಹ ಅಧ್ಯಕ್ಷ ಇಕುವೊ ಟೆಕೆವುಚಿ ಮತ್ತು ಟೊರಾಯ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮಿಟ್‌ಸು ಒಯ ಅವರ ಹೆಸರುಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT