ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಗಾಜಾದಲ್ಲಿ ಇಸ್ರೇಲ್ ದಾಳಿ ತೀವ್ರ: ವಲಸೆ ಹೊರಟ ಸಾವಿರಾರು ಜನರು

Published 2 ಜುಲೈ 2024, 16:04 IST
Last Updated 2 ಜುಲೈ 2024, 16:04 IST
ಅಕ್ಷರ ಗಾತ್ರ

ಕೈರೊ/ ಗಾಜಾ: ದಕ್ಷಿಣ ಗಾಜಾ ಪಟ್ಟಿಯ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್ ಪಡೆಯು ಮಂಗಳವಾರ ಬಾಂಬ್‌ ಸುರಿಮಳೆಗರೆದಿದೆ. ಇದರ ಪರಿಣಾಮ ಸಾವಿರಾರು ಮಂದಿ ಪ್ಯಾಲೆಸ್ಟೀನಿಯರು ತಮ್ಮ ಮನೆಗಳನ್ನು ತೊರೆದು ಅನ್ಯ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ. 

ಇಸ್ರೇಲ್ ಪಡೆಯ ದಾಳಿಯಲ್ಲಿ ಪ್ಯಾಲೆಸ್ಟೀನ್‌ನ ಎಂಟು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧದಲ್ಲಿ ಸೋಮವಾರ ತಮ್ಮ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. 

ಹಮಾಸ್ ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಲು ಯುದ್ಧ ಟ್ಯಾಂಕರ್‌ಗಳು ಪುನಃ ಬರಲಿವೆ. ಹೀಗಾಗಿ, ಪೂರ್ವ ಖಾನ್ ಯೂನಿಸ್ ಭಾಗದಲ್ಲಿರುವ ವಿವಿಧ ಗ್ರಾಮಗಳು ಮತ್ತು ಪಟ್ಟಣಗಳಲ್ಲಿರುವ ಜನರು ಬೇರೆ ಸ್ಥಳಗಳಿಗೆ ತೆರಳುವಂತೆ ಇಸ್ರೇಲ್ ಸೇನೆ ಆದೇಶಿಸಿದೆ. 

ಇದರ ಹೊರತಾಗಿಯೂ ಅದೇ ಸ್ಥಳದಲ್ಲಿ ಉಳಿದುಕೊಂಡ ಸಾವಿರಾರು ಮಂದಿಯನ್ನು ಮಧ್ಯರಾತ್ರಿ ವೇಳೆ ಬಲವಂತವಾಗಿ ಮನೆಗಳಿಂದ ಹೊರದಬ್ಬಲಾಗುತ್ತಿದೆ ಎಂದು ಸ್ಥಳೀಯರು ಮತ್ತು ಹಮಾಸ್ ಮಾಧ್ಯಮ ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT