ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಐತಿಹಾಸಿಕವಾದ, ಅಧಿಕೃತ ಭೇಟಿ ನೀಡಿದ ಒಂದು ತಿಂಗಳ ನಂತರ, ಅಮೆರಿಕದ ಖ್ಯಾತ ಸಂಸದರ ಗುಂಪು ಮತ್ತು ಶ್ವೇತಭವನ, ಬುಧವಾರ ಭಾರತ- ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದು ಹೇಳಿವೆ.

ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಮೊದಲ ಭೇಟಿ ನೀಡುವ ಮತ್ತು ಪ್ರಧಾನಿ ಅವರನ್ನು ಭೇಟಿಯಾಗುವವರೆಗೆ, ಭಾರತ ಮತ್ತು ಪ್ರಧಾನಿಯವರನ್ನು ಟೀಕಿಸುವವರಲ್ಲಿ ಪ್ರಮುಖರಾಗಿದ್ದ ಸೆನೆಟ್ ನಾಯಕ ಚಕ್ ಶುಮರ್ ‘ನಾನು ಅವರನ್ನು (ಮೋದಿ) ಇಷ್ಟಪಡುತ್ತೇನೆ’ ಎಂದು ಸುದ್ದಿಸಂಸ್ಥೆಗ ತಿಳಿಸಿದ್ದಾರೆ.

ಸಂಸತ್ತಿನ ಸದಸ್ಯರಿಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದ ಹುಲ್ಲುಹಾಸಿನಲ್ಲಿ ಬುಧವಾರ ಮಧ್ಯಾಹ್ನ ಆಯೋಜಿಸಿದ್ದ ವಾರ್ಷಿಕ ಭೋಜನ ಕೂಟದಲ್ಲಿ ಹಲವು ಸಂಸದರು ಪಾಲ್ಗೊಂಡಿದ್ದರು.

‘ಕಳೆದ ತಿಂಗಳು ಪ್ರಧಾನಿ ಮೋದಿ ಅವರು ನೀಡಿದ ಭೇಟಿಯು ಅತ್ಯಂತ ಯಶಸ್ವಿ ಮತ್ತು ಮಹತ್ವದ್ದಾಗಿದೆ. ಭಾರತದೊಂದಿಗಿನ ಸಂಬಂಧವು ಎಂದಿಗಿಂತಲೂ ಗಟ್ಟಿಯಾಗಿದೆ. ನಾವು ಹಲವು ಪ್ರಮುಖ ಒಪ್ಪಂದಗಳನ್ನು ಘೋಷಿಸಿದ್ದೇವೆ. ಅವುಗಳಲ್ಲಿ ಕೆಲವು ಕಾರ್ಯಗತಗೊಳ್ಳುತ್ತಿವೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ದೀರ್ಘಾವಧಿಯ ಭವಿಷ್ಯ ಮತ್ತು ಭಾರತದೊಂದಿಗಿನ ಸಂಬಂಧಕ್ಕೆ ಸಂಬಂಧಿಸಿ ನಾವು ತುಂಬಾ ಆಶಾವಾದಿಯಾಗಿದ್ದೇವೆ. ಉಭಯತ್ರರ ಬಾಂಧವ್ಯ ಮುಂದುವರಿಯುವ ಪ್ರಬಲ ನಂಬಿಕೆ ನಮ್ಮದು’ ಎಂದು ಜೀನ್ ಪಿಯರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.