ವಾಷಿಂಗ್ಟನ್: ಹ್ಯೂಸ್ಟನ್ನ ಅಂಚೆ ಕಚೇರಿಗೆ, ಕರ್ತವ್ಯದಲ್ಲಿದ್ದಾಗ ಹತ್ಯೆಗೀಡಾದ ಸಿಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ ಅವರ ಹೆಸರಿಡುವ ಮಸೂದೆಗೆ ಅಮೆರಿಕದ ಸೆನೆಟ್ ಸರ್ವಾನುಮತದ ಅಂಗೀಕಾರ ನೀಡಿದೆ.

ಹ್ಯೂಸ್ಟನ್ನ 315 ಅಡಿಕ್ಸ್ ಹೋವೆಲ್ ರಸ್ತೆಯಲ್ಲಿರುವ ಅಂಚೆ ಕಚೇರಿಯನ್ನು ‘ಡೆಪ್ಯುಟಿ ಸಂದೀಪ್ ಸಿಂಗ್ ಧಲಿವಾಲ್ ಪೋಸ್ಟ್ ಆಫೀಸ್ ಕಟ್ಟಡ’ ಎಂದು ಮರುನಾಮಕರಣ ಮಾಡುವ ಮಸೂದೆಯನ್ನು ಸಂಸತ್ನ ಕೆಳಮನೆ (ಹೌಸ್ ಆಫ್ ರೆಪ್ರಸೆಂಟೇಟಿವ್) ಸೆಪ್ಟೆಂಬರ್ನಲ್ಲಿ ಅಂಗೀಕರಿಸಿತ್ತು.

ಈ ಮಸೂದೆಗೆ ಕೇವಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂಕಿತವೊಂದು ಬಾಕಿಯಿದೆ. 2019 ಸೆಪ್ಟೆಂಬರ್ 27ರಂದು ಕರ್ತವ್ಯ ನಿರತರಾಗಿದ್ದಾಗ ಸಂದೀಪ್ ಸಿಂಗ್ ಹತ್ಯೆಗೀಡಾಗಿದ್ದರು.

ಇದು ಭಾರತೀಯ ಅಮೆರಿಕನ್ನ ಹೆಸರಿನಲ್ಲಿ ನಾಮಕರಣ ಮಾಡಲಾಗುತ್ತಿರುವ ಅಮೆರಿಕದ ಎರಡನೇ ಅಂಚೆ ಕಚೇರಿಯಾಗಿದೆ. ಈ ಹಿಂದೆ 2006ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಅಂಚೆ ಕಚೇರಿಯನ್ನು ಭಾರತೀಯ ಅಮೆರಿಕನ್ ಸಂಸದ ದಲೀಪ್ ಸಿಂಗ್ ಸೌಂದ್ ಎಂಬುದಾಗಿ ಮರುನಾಮಕರಣ ಮಾಡಲಾಗಿತ್ತು.

ಈ ವೇಳೆ ಮತ್ತೊಂದು ಅಂಚೆ ಕಚೇರಿಯನ್ನು ಮರುನಾಮಕರಣ ಮಾಡುವ ಮಸೂದೆಗೆ ಅಮೆರಿಕದ ಸೆನೆಟ್ ಅಂಗೀಕಾರ ನೀಡಿದೆ. ಟೆಕ್ಸಾಸ್ ಕ್ಯಾಸ್ಟ್ರೊವಿಲ್ಲೆಯ ಅಂಚೆ ಕಚೇರಿಯನ್ನು ‘ಲ್ಯಾನ್ಸ್ ಕಾರ್ಪೋರಲ್ ರೊನಾಲ್ಡ್ ಡೈನ್ ರೈರ್ಡನ್ ಅಂಚೆ ಕಚೇರಿ’ ಎಂದು ಮರುನಾಮಕರಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.