ವಾಷಿಂಗ್ಟನ್: ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಸಂಭ್ರಮಕ್ಕಾಗಿ ಅಮೆರಿಕದಲ್ಲಿರುವ ದೇವಾಲಯಗಳಲ್ಲಿ ವಾರಪೂರ್ತಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ ಎಂದು ಈ ದೇವಾಲಯಗಳನ್ನು ಪ್ರತಿನಿಧಿಸುವ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಾವು ಈ ವಿದ್ಯಮಾನದ ಭಾಗವಾಗಿರುವುದು ನಮ್ಮ ಅದೃಷ್ಟ ಮತ್ತು ದೇವರ ಆಶೀರ್ವಾದ. ಶತಮಾನಗಳ ಕಾಯುವಿಕೆ ಮತ್ತು ಹೋರಾಟದ ನಂತರ ನಮ್ಮ ಕನಸಿನ ರಾಮಮಂದಿರವು ಸಾಕಾರಗೊಳ್ಳುತ್ತಿದೆ. ಅಮೆರಿಕ ಮತ್ತು ಕೆನಡಾದಲ್ಲಿ ಈ ಬಗ್ಗೆ ಪ್ರತಿಯೊಬ್ಬರು ಭಾವನಾತ್ಮಕವಾಗಿದ್ದಾರೆ. ಎಲ್ಲರೂ ಭಗವಾನ್ ಶ್ರೀರಾಮನನ್ನು ಮಂದಿರದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ’ಎಂದು ಹಿಂದೂ ಮಂದಿರಗಳ ಸಬಲೀಕರಣ ಮಂಡಳಿಯ (ಎಚ್‌ಎಂಇಸಿ) ತೇಜಲ್ ಶಾ ತಿಳಿಸಿದ್ದಾರೆ.

ಹಿಂದೂ ಮಂದಿರಗಳ ಸಬಲೀಕರಣ ಮಂಡಳಿ(ಎಚ್‌ಎಂಇಸಿ) ಅಮೆರಿಕದಲ್ಲಿರುವ 1,100ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಉನ್ನತ ಸಂಸ್ಥೆಯಾಗಿದೆ.

ಅಮೆರಿಕದ ಸಣ್ಣ ಮತ್ತು ದೊಡ್ಡ ದೇವಾಲಯಗಳಲ್ಲಿ ವಾರದ ಅವಧಿಯ ಆಚರಣೆಗಳು ಜನವರಿ 15ರಂದು ಆರಂಭವಾಗಲಿದ್ದು, ಅಯೋಧ್ಯೆಯಿಂದ ರಾಮಮಂದಿರ ಉದ್ಘಾಟನೆಯ ನೇರ ಪ್ರಸಾರದಲ್ಲಿ ಮುಕ್ತಾಯಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಸಾವಿರಾರು ಮಂದಿ ಉದ್ಘಾಟನಾ ಸಮಾರಂಭವನ್ನು ನೇರವಾಗಿ ವೀಕ್ಷಿಸಲು ಕಾತರರಾಗಿದ್ದಾರೆ ಎಂದು ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.