ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ಯುದ್ಧಕ್ಕೆ ಅಂತ್ಯ: ಭಾರತಕ್ಕೆ ಅಮೆರಿಕ ಮನವಿ

Published 16 ಜುಲೈ 2024, 15:29 IST
Last Updated 16 ಜುಲೈ 2024, 15:29 IST
ಅಕ್ಷರ ಗಾತ್ರ

ಮಿಲ್ವಾಕಿ: ರಷ್ಯಾ ಜೊತೆಗಿನ ತನ್ನ ಸುದೀರ್ಘ ಬಾಂಧವ್ಯದ ಆಧರಿಸಿ ಉಕ್ರೇನ್‌ ವಿರುದ್ಧ ನಡೆಸುತ್ತಿರುವ ‘ಕಾನೂನು ಬಾಹಿರ ಯುದ್ಧ’ವನ್ನು ನಿಲ್ಲಿಸುವಂತೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ಮೇಲೆ ಒತ್ತಡಹೇರಬೇಕು ಎಂದು ಅಮೆರಿಕ ಆಗ್ರಹಪಡಿಸಿದೆ.

ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾತು ಹೇಳಿದರು. ಉಕ್ರೇನ್‌ ವಿರುದ್ಧದ ಯುದ್ಧ ಅಂತ್ಯಗೊಳಿಸಲು, ಶಾಂತಿ ಸ್ಥಾಪಿಸಲು ಒತ್ತು ನೀಡಬೇಕು.  ಈ ಮೂಲಕ ರಷ್ಯಾವು ಉಕ್ರೇನ್‌ನ ಭೌಗೋಳಿಕ ಗಡಿ ಮತ್ತು ಸಾರ್ವಭೌಮತೆ ಗೌರವಿಸಲು ಒತ್ತಡ ಹೇರಬೇಕು ಎಂದು ಹೇಳಿದರು.

ಅಮೆರಿಕದ ಬಹುಮುಖ್ಯ ಪಾಲುದಾರರಾದ ಭಾರತ ಸರ್ಕಾರದಿಂದ ನಾವು ಇದನ್ನೇ ಬಯಸುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸದಿಂದ ನಿರ್ಗಮಿಸಿದ ಹೊತ್ತಿನಲ್ಲೂ ಅವರು ಇದೇ ಮಾತು ಹೇಳಿದ್ದರು.

ರಷ್ಯಾ ಪ್ರವಾಸದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದ ಮೋದಿ ಅವರು, ಯುದ್ಧಭೂಮಿಯಲ್ಲಿ ಉಕ್ರೇನ್‌ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಾಗದು. ಬಾಂಬ್‌, ಗುಂಡಿನ ದಾಳಿ ಜೊತೆಗೆ ಶಾಂತಿ ಸ್ಥಾಪನೆ ಯತ್ನ ನಡೆಯದು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT