ವಾಷಿಂಗ್ಟನ್: ಎರಿಕ್ ಗಾರ್ಸೆಟ್ಟಿ ಅವರು ಭಾರತದ ಅಮೆರಿಕ ರಾಯಭಾರಿಯಾಗಿ ಸೇವೆ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಎರಿಕ್ ಅವರ ನಾಮನಿರ್ದೇಶನವನ್ನು ಅನುಮೋದಿಸಲು ನಿಗದಿಪಡಿಸಲಾಗಿದ್ದ ಸಂಸದೀಯ ಚುನಾವಣೆಯನ್ನು ಮಾರ್ಚ್ 8ರ ವರೆಗೆ ಮುಂದೂಡಲಾಗಿರುವುದರಿಂದ ಶ್ವೇತಭವನ ಈ ನಿರ್ಧಾರ ಕೈಗೊಂಡಿದೆ.

ಲಾಸ್ ಏಂಜಲೀಸ್ನ ಮಾಜಿ ಮೇಯರ್ ಎರಿಕ್ ಅವರನ್ನು ಭಾರತದ ಅಮೆರಿಕ ರಾಯಭಾರಿಯನ್ನಾಗಿ 2021ರ ಜುಲೈನಲ್ಲಿ ಅಲ್ಲಿಯ ಅಧ್ಯಕ್ಷ ಜೊ ಬೈಡನ್ ಅವರು ನಾಮನಿರ್ದೇಶನ ಮಾಡಿದ್ದರು. ಆದರೆ, ಅವರನ್ನು ಈ ಹುದ್ದೆಗೆ ನೇಮಕಾತಿ ಮಾಡಲು ಆಡಳಿತಾರೂಢ ಡೆಮಾಕ್ರೆಟಿಕ್ ಪಕ್ಷಕ್ಕೆ ಸಾಕಷ್ಟು ಬೆಂಬಲ ಇರಲಿಲ್ಲ. ಜೊತೆಗೆ, ಎರಿಕ್ ಅವರ ಮೇಲೆ ಲೌಂಗಿಕ ದೌರ್ಜನ್ಯದ ಆರೋಪಗಳು ಇರುವ ಕಾರಣ ಅವರ ನಾಮನಿರ್ದೇಶನವನ್ನು ರಿಪಬ್ಲಿಕನ್ ಪಕ್ಷವು ವಿರೋಧಿಸಿದ್ದವು. ಹೀಗಾಗಿ ಈ ನಾಮನಿರ್ದೇಶನವನ್ನು ಅಮೆರಿಕದ ಸಂಸತ್ತಿನಲ್ಲಿ ಮತಕ್ಕೆ ಹಾಕಲಾಗಲಿಲ್ಲ. ಇದರಿಂದಾಗಿ ಎರಿಕ್ ಅವರ ನಾಮನಿರ್ದೇಶನಕ್ಕೆ ತಡೆ ನೀಡಲಾಗಿತ್ತು.

ಈ ವರ್ಷ ಜನವರಿಯಲ್ಲಿ ಬೈಡನ್ ಅವರು ಮತ್ತೊಮ್ಮೆ ಎರಿಕ್ ಅವರನ್ನು ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಎರಿಕ್ ಅವರ ನಾಮನಿರ್ದೇಶನವನ್ನು ಮತಕ್ಕೆ ಹಾಕಲು ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಬಾಬ್ ಮೆನೆಂಡೆಝ್ ಅವರು ಫೆಬ್ರುವರಿ 28ಕ್ಕೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಇದನ್ನು ಸದ್ಯ ಮಾರ್ಚ್ 8ರವರೆಗೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.