ನ್ಯೂಯಾರ್ಕ್ (ಪಿಟಿಐ): ಭಾರತೀಯ ಸಂಜಾತ ಕವಿ ವಿಜಯ್ ಶೇಷಾದ್ರಿ ಅವರಿಗೆ ಕವನ ವಿಭಾಗದಲ್ಲಿ ಸ್ವಾರಸ್ಯಕರ ಹಾಗೂ ತತ್ವಚಿಂತನೆಯ ಕವನಗಳ ಸಂಗ್ರಹಕ್ಕಾಗಿ 2014ರ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ.

ಇದೇ ವೇಳೆಗೆ ದಿ ವಾಷಿಂಗ್ಟನ್ ಪೋಸ್ಟ್ ಮತ್ತು ಗಾರ್ಡಿಯನ್ ಪತ್ರಿಕೆಗಳಿಗೆ ಅಮೆರಿಕಾದ ರಹಸ್ಯ ಜಾಗತಿಕ ಗೂಢಚರ್ಯೆ ಕಾರ್ಯಕ್ರಮಗಳ ಕುರಿತ ವರದಿಗಾರಿಕೆಗಾಗಿ ಪುಲಿಟ್ಜರ್ ಪ್ರಶಸ್ತಿ ಪ್ರಾಪ್ತವಾಗಿದೆ.

ವಿಜಯ್ ಶೇಷಾದ್ರಿ ಅವರಿಗೆ '3 ಸೆಕ್ಷನ್ಸ್' ಕವನ ಸಂಗ್ರಹಕ್ಕಾಗಿ ಪತ್ರಿಕೋದ್ಯಮದಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ. ಹುಟ್ಟಿನಿಂದ ಬುದ್ಧಿ ಮಾಂದ್ಯತೆವರೆಗಿನ ಮಾನವ ಪ್ರಜ್ಞೆಯನ್ನು ಪರೀಕ್ಷಿಸುವ ಕವನಗಳ ಸಂಗ್ರಹ ಇದಾಗಿದೆ.

ಪತ್ರಿಕೋದ್ಯಮದ ವಿವಿಧ ರಂಗಗಳಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ 98ನೇ ವಾರ್ಷಿಕ ಪುಲಿಟ್ಜರ್ ಪ್ರಶಸ್ತಿಗಳನ್ನು 'ಪುಲಿಟ್ಜರ್ ಪ್ರಶಸ್ತಿ' ಮಂಡಳಿಯ ಶಿಫಾರಸು ಮೇರೆಗೆ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಪ್ರಕಟಿಸಲಾಗಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ, 60ರ ಹರೆಯದ ಶೇಷಾದ್ರಿ ಅವರು 10,000 ಅಮೆರಿಕನ್ ಡಾಲರ್ ಮೌಲ್ಯದ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

1954ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶೇಷಾದ್ರಿ ಐದರ ಹರೆಯದ ಬಾಲಕನಾಗಿದ್ದಾಗ ಅಮೆರಿಕಾಕ್ಕೆ ಬಂದಿದ್ದು, ಓಹಿಯೋದ ಕೊಲಂಬಸ್ ನಲ್ಲಿ ಬೆಳೆದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡ ಐದನೇ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ವಿಜಯ್ ಶೇಷಾದ್ರಿ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.