ಲಂಡನ್(ಪಿಟಿಐ): ಭೂಮಿಗೆ ಮರಳುವ ಖಚಿತತೆ ಇಲ್ಲದಿದ್ದರೂ ಮಂಗಳ ಗ್ರಹಕ್ಕೆ ಹತ್ತು ಸಾವಿರ ಜನರನ್ನು ಕರೆದೊಯ್ಯಲು ಡಚ್ ಕಂಪೆನಿಯೊಂದು ಮುಂದಾಗಿದೆ.

2023ರ ವೇಳೆಗೆ ಮಂಗಳನ ಅಂಗಳದಲ್ಲಿ ಜನವಸತಿಯನ್ನು ಆರಂಭಿಸಲು `ಮಾರ್ಸ್ ಒನ್' ಕಂಪೆನಿ ಆಲೋಚನೆ ಹೊಂದಿದ್ದು. ಆ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುವ ಈ ಯಾತ್ರೆಯಲ್ಲಿ ನಾಲ್ವರು ಗಗನಯಾತ್ರಿಗಳು ಪಾಲ್ಗೊಳ್ಳಲಿದ್ದಾರೆ.

ಕಂಪೆನಿ ತನ್ನ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, `ಮಂಗಳನ ಅಂಗಳಕ್ಕೆ ತೆರಳುವವರು ಮತ್ತೆ ಭೂಮಿಗೆ ಮರಳುವ ಖಚಿತತೆ ಮತ್ತು ಸಾಧ್ಯತೆ ಇಲ್ಲ' ಎಂದು ಸ್ಪಷ್ಟಪಡಿಸಿದೆ.

ಜಾಲತಾಣದಲ್ಲಿನ ಪ್ರಕಟಣೆಯನ್ವಯ 18ರಿಂದ 62 ವರ್ಷದೊಳಗಿನ ಹತ್ತು ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಕಂಪೆನಿಯ ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.