ದುಬೈ: ಮಿನಿ ಸ್ಕರ್ಟ್ ಧರಿಸಿ ಸಾರ್ವಜನಿಕವಾಗಿ ಓಡಾಡಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಯುವತಿಯನ್ನು ರಿಯಾದ್ ಪೊಲೀಸರು ಬಂಧಿಸಿದ್ದಾರೆ.

ಮಿನಿಸ್ಕರ್ಟ್, ಕ್ರಾಪ್ ಟಾಪ್ ತೊಟ್ಟು, ಕೂದಲನ್ನು ಬಿಟ್ಟು ಸಂಪೂರ್ಣ ಫ್ಯಾಷನ್ ಹುಡುಗಿಯಾಗಿ ರಸ್ತೆಯ ತುಂಬೆಲ್ಲಾ ಓಡಾಡಿದ್ದ ವಿಡಿಯೊವನ್ನು ಯುವತಿಯು ಸ್ನಾಪ್ಚಾಟ್ನಲ್ಲಿ ಅಪ್ಲೋಡ್ ಮಾಡಿದ್ದರು.

ಇವರ ಈ ವರ್ತನೆ ಹಾಗೂ ವಸ್ತ್ರಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಯುವತಿಯು ಇಸ್ಲಾಮಿಕ್ ರಾಷ್ಟ್ರದ ವಸ್ತ್ರ ಸಂಹಿತೆಯನ್ನು ಹಾಳುಗೆಡವಿದ್ದಾರೆ ಎಂದು ಆನ್ಲೈನ್ನಲ್ಲಿ ಯುವತಿಯ ವಿರುದ್ಧ ಕೆಲವರು ಕಿಡಿಕಾರಿದ್ದರು. ಇನ್ನು ಹಲವರು ಬೆಂಬಲ ವ್ಯಕ್ತಪಡಿಸಿದ್ದರು.

ಸೌದಿ ಅರೇಬಿಯಾದಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಆದರೆ ಯುವತಿಯು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.